ಲೂಸ್​ ಮಾದ ಬರ್ತ್​ಡೇಗೆ ಲಂಕೆಯಿಂದ ಸ್ಪೆಷಲ್​ ಗಿಫ್ಟ್​..!

ರಗಡ್ ಲುಕ್​ನಲ್ಲಿ ಲೂಸ್​ ಮಾದ ಯೋಗಿ
ಲೂಸ್​ ಮಾದ ಬರ್ತ್​ಡೇಗೆ ಲಂಕೆಯಿಂದ ಸ್ಪೆಷಲ್​ ಗಿಫ್ಟ್​..!

ಲೂಸ್​ ಮಾದ ಯೋಗಿ ಚಿತ್ರರಂಗದಲ್ಲಿ ತಮ್ಮದೇ ಆದ ಡಿಫರೆಂಟ್​ ಮ್ಯಾನರಿಸಂನಿಂದ ಅಭಿಮಾನಿಗಳನ್ನ ಗೆದ್ದ ನಟ. ವರ್ಷಕ್ಕೊಂದು ಸಿನಿಮಾ ಕೊಡುತ್ತಿದ್ದ ಯೋಗಿ ಇತ್ತೀಚಿಗೆ ಕಿರುತೆರೆಯಲ್ಲಿ ಮಿಂಚಿದ್ದರು. ಕಿರುತೆರೆಯ ಗಾನ ಬಜಾನ ಶೋ ನಡೆಸಿಕೊಡುವ ಮೂಲಕ ಸಖತ್​ ಸೈಲೆಂಟ್​ ಎನ್ನುವವರಿಗೆ ತಾನೊಬ್ಬ ಮಾತುಗಾರ ಎನ್ನುವುದನ್ನು ಯೋಗಿ ತೋರಿಸಿಕೊಟ್ಟಿದ್ದರು. ಕಿರುತೆರೆತ ಪ್ರೇಕ್ಷಕರು ಕೂಡ ಯೋಗಿ ನಿರೂಪಣೆಯನ್ನ ಮೆಚ್ಚಿಕೊಂಡಿದ್ದರು. ಈಗ ಯೋಗಿ ಮತ್ತೆ ತಮ್ಮ ಸಿನಿ ಜರ್ನಿಯಲ್ಲಿ ಬ್ಯೂಸಿಯಾಗಿದ್ದಾರೆ. ಯೋಗಿ ಅಭಿನಯದ ಲಂಕೆ ಚಿತ್ರ ರಿಲೀಸ್​ಗೆ ಸಿದ್ಧವಾಗಿದೆ. ಯೋಗಿಯವರ ಹುಟ್ಟುಹಬ್ಬದ ಪ್ರಯುಕ್ತ ಲಂಕೆ ಚಿತ್ರದ ಮೋಷನ್​ ಪೋಸ್ಟರ್​ ರಿಲೀಸ್​ ಆಗಿದೆ.

ಆನಂದ್​ ಆಡಿಯೋ ಯುಟೂಬ್​ ಚಾನಲ್​ನಲ್ಲಿ ಲಂಕೆ ಚಿತ್ರದ ಮೋಷನ್​ ಪೋಸ್ಟರ್​ ರಿಲೀಸ್​ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ. ಖಡಕ್​ ಹಾಗೂ ರಗಡ್​ ಲುಕ್​ನಲ್ಲಿ ಯೋಗಿ ಕಾಣಿಸಿಕೊಂಡಿದ್ದು, ಇಂದೊಂದು ಪಕ್ಕಾ ಆ್ಯಕ್ಷನ್​ ಸಿನಿಮಾ ಎನ್ನುವಂತಿದೆ.. ಅದನ್ನ ಈ ಕೂಡ ಪೋಸ್ಟರ್​ ಪ್ರೂವ್​ ಮಾಡುತ್ತಿದೆ.

ರಾಮ್​ ಪ್ರಸಾದ್​ ಎಂಡಿ ಆ್ಯಕ್ಷನ್​ ಕಟ್ ಹೇಳಿರುವ ಲಂಕೆ, ದಿ ಗ್ರೇಟ್​ ಎಂಟರ್​ ಟೈನರ್​ ಬ್ಯಾನರ್​ ಅಡಿಯಲ್ಲಿ ಪಟೇಲ್​ ಶ್ರೀನಿವಾಸ್​ ಹಾಗೂ ಸುರೇಖಾ ರಾಮ್​ ಪ್ರಸಾದ್​​ ಬಂಡವಾಳ ಹೂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಲೂಸ್​ ಮಾದ ಯೋಗಿ ಜೊತೆ ಕಾವ್ಯ ಶೆಟ್ಟಿ, ಕೃಷಿತಾ ಪಾಂಡ ಸ್ಕ್ರೀನ್​ ಶೇರ್​ ಮಾಡಿದ್ದಾರೆ.. ಇತ್ತೀಚಿಗಷ್ಟೇ ನಿಧನರಾದ ಸಂಚಾರಿ ವಿಜಯ್​ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಸದ್ಯ ಥಿಯೇಟರ್​ಗಳು ಓಪನ್​ ಆಗಿ ಪರಿಸ್ಥಿತಿ ತಿಳಿಗೊಳ್ಳಲೆಂದು ಚಿತ್ರತಂಡ ಕಾಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಆದಷ್ಟು ಬೇಗ ಲೂಸ್​ ಮಾದ ಯೋಗಿಯವರು ಲಂಕೆಯ ಅವತಾರದಲ್ಲಿ ಅಭಿಮಾನಿಗಳನ್ನ ರಂಜಿಸಲಿದ್ದಾರೆ.

ವರದಿ-ಮಲ್ಲಿಕಾ ಪೂಜಾರಿ

Related Stories

No stories found.
TV 5 Kannada
tv5kannada.com