ಖುಷಿ ಹಂಚಿಕೊಂಡ ಕಿಚ್ಚ ಸುದೀಪ್..!

ಖುಷಿ ಹಂಚಿಕೊಂಡ ಕಿಚ್ಚ ಸುದೀಪ್..!

ಪೈಲ್ವಾನ್​ ಚಿತ್ರದಲ್ಲಿ ಸಿಕ್ಸ್​ ಪ್ಯಾಕ್​ ಮೂಲಕ ಮಿಂಚಿದ್ದ ಕಿಚ್ಚ ಸುದೀಪ್ ಅಂದಿನಿಂದ​ ವರ್ಕಔಟ್​​ ನಲ್ಲಿ ಫುಲ್​ ಪರ್ಪೆಕ್ಟ್. ಕೆಲ ಕಾರಣದಿಂದ ಕಿಚ್ಚ ಇತ್ತೀಚಿಗೆ ತಮ್ಮ ವರ್ಕ್​ಔಟ್​ಗೆ ಬ್ರೇಕ್​ ಹಾಕಿದ್ರು.. ಆದರೆ ಇದೀಗ ಮತ್ತೆ ಕಿಚ್ಚ ವರ್ಕಔಟ್ ನತ್ತ ಮುಖ ಮಾಡಿದ್ದು, ಈ ಬಗ್ಗೆ ಅಭಿಮಾನಿಗಳೊಂದಿಗೆ ಖುಷಿಹಂಚಿಕೊಂಡಿದ್ದಾರೆ.

ತೆರೆ ಮೇಲೆ ಕಿಚ್ಚನ ಸೈಲಿಶ್​ ಲುಕ್​ ನೋಡಿ ಫಿದಾ ಆಗದವರಿಲ್ಲ. ಅವರ ಫಿಟ್​ನೆಸ್​ ಸೀಕ್ರೆಟ್​ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಮೊದಲೆಲ್ಲ ಫಿಟ್​ನೆಸ್​ ಬಗ್ಗೆ ಅಷ್ಟೋಂದು ಗಮನ ಕೊಡದ ಕಿಚ್ಚ, ಪೈಲ್ವಾನ್ ಚಿತ್ರದ ಬಳಿಕ ಚಾಚು ತಪ್ಪದೇ ವರ್ಕ್​​ಔಟ್​​ ಪಾಲಿಸುತ್ತಿದ್ದರು. ಆದರೆ ಕೊರೊನಾ ಬಂದಾಗಿನಿಂದ ಜನಸಾಮಾನ್ಯರಷ್ಟೇ ಅಲ್ಲಾ, ಸ್ಟಾರ್ಸ್​ಗಳ ದಿನಚರಿ ಕೂಡ ಚೇಂಜ್​ ಆಗಿತ್ತು. ಲಾಕ್​ಡೌನ್​ನಿಂದ ಜಿಮ್​ಗಳು ಕ್ಲೋಸ್​ ಆಗುತ್ತಿದ್ದಂತೆ ನಟ-ನಟಿಯರು ಮನೆಯಲ್ಲೇ ವರ್ಕ್​ಔಟ್​ ಆರಂಭಿಸಿದ್ದರು. ಅದೇ ರೀತಿ ಕಿಚ್ಚ ಸುದೀಪ್​ ಕೂಡ ಫಿಟ್​ನೆಸ್​ ಕಾಪಾಡಿಕೊಳ್ಳುತ್ತಿದ್ದರು. ಆದರೆ ಸ್ವತಃ​ ಕಿಚ್ಚನಿಗೆ ಕೊರೊನಾ ಬಂದ ಮೇಲೆ ವರ್ಕ್​ಔಟ್​ಗೆ ಬ್ರೇಕ್​ ಹಾಕಿ ಆರೋಗ್ಯ ಚೇತರಿಕೆಯತ್ತ ಗಮನ ಹರಿಸಿದ್ದರು.

ಇದೀಗ ಕಿಚ್ಚ ಸುದೀಪ್​ ಹಲವು ದಿನಗಳ ಬಳಿಕ ಮತ್ತೆ ವರ್ಕೌಟ್ ಶುರು ಮಾಡಿದ್ದು, ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರ್ಕೌಟ್ನಿಂದ ನನ್ನ ಮೊದಲಿನ ದಿನಚರಿಯನ್ನು ಪುನಾರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮುಖ್ಯವಾದ ಸಮಯದಲ್ಲಿ ಜೊತೆಯಾದ ವೈದ್ಯರು, ತರಬೇತುದಾರರು, ಕುಟುಂಬವರಿಗೆ ಮತ್ತು ನನ್ನ ಸ್ನೇಹಿತರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆ ಕಿಚ್ಚ ಸುದೀಪ್​ ತಮ್ಮ ಮೊದಲಿನ ದಿನಚರಿ ಆರಂಭಿಸಿದ್ದು, ವರ್ಕ್ಔಟ್​ ಮೂಲಕ ಮುಂದಿನ ಸಿನಿಮಾದ ತಯಾರಿ ಕೂಡ ಆರಂಭಿಸಿರಬಹುದು ಎನ್ನುವುದು ಅಭಿಮಾನಿಗಳ ಗೆಸ್​

Related Stories

No stories found.
TV 5 Kannada
tv5kannada.com