Tuesday, October 26, 2021

ಕೋಟಿಗೊಬ್ಬ-3 ಶೋ ರದ್ದು- ಅಭಿಮಾನಿಗಳ ಕಾತುರತೆಗೆ ತಣ್ಣೀರು

Must read

ಇಂದು ತೆರೆ ಕಾಣಲು ಸಜ್ಜಾಗಿದ್ದ ಸ್ಯಾಂಡಲ್​ವುಡ್​ನ ಬಾದ್​ಶಾ ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಫಸ್ಟ್​ ಶೋ ರದ್ದಾಗಿದೆ.

ಕೋಟಿಗೊಬ್ಬ-3 ಚಿತ್ರಕ್ಕೆ ಭರಪೂರ ಸ್ವಾಗತ ನೀಡಲು ಅಭಿಮಾನಿಗಳು ಸಕಲ ರೀತಿಯಲ್ಲೂ ತಯಾರಿ ನಡೆಸಿದ್ದು, ಥಿಯೇಟರ್‌ಗಳಲ್ಲಿ ಇಂದು ಮುಂಜಾನೆಯಿಂದಲೇ ಸಂಭ್ರಮ ಮನೆ ಮಾಡಿತ್ತು. ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಬೆಳ್ಳಂಬೆಳಗ್ಗೆಯೇ  ಶಾಕಿಂಗ್​ ನ್ಯೂಸ್​​ ಸಿಕ್ಕಿದೆ.

ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ಸೇರಿದಂತೆ ಹಲವೆಡೆ ತಾಂತ್ರಿಕ ಸಮಸ್ಯೆಯಿಂದ ಫಸ್ಟ್​ ಶೋ ರದ್ದಾಗಿವೆ ಎನ್ನಲಾಗಿದೆ. ನಿನ್ನೆಯೇ ಕೋಟಿಗೊಬ್ಬ-3 ಚಿತ್ರದ 7ಗಂಟೆ ಶೋನ ಎಲ್ಲಾ ಟಿಕೆಟ್​ಗಳು ಸೋಲ್ಡ್ ಔಟ್ ಆಗಿದ್ದವು. ಸಿನಿಮಾ ನೋಡಲು ಚಿತ್ರಮಂದಿರದ ಬಳಿ ನೂರಾರು ಅಭಿಮಾನಿಗಳು ಜಮಾಯಿಸಿದ್ದು, ಶೋ ಕ್ಯಾನ್ಸಲ್ ಸುದ್ದಿಯಿಂದ ಕಿಚ್ಚನ ಅಭಿಮಾನಿಗಳು ನಿರಾಸೆಯಿಂದ ವಾಪಸ್​ ಆಗುತ್ತಿದ್ದಾರೆ.

More articles

Latest article