Wednesday, May 18, 2022

Viral video: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಹೊಸ ಮನೆ​ ಹೇಗಿದೆ ಗೊತ್ತಾ..?

Must read

ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಹಾಗೂ ನಟ ವಿಕ್ಕಿ ಕೌಶಲ್​ ಅವರು ಸದ್ಯದಲ್ಲೇ ತಮ್ಮ ಹೊಸ ಮನೆಗೆ ಪ್ರವೇಶಿಸಲಿದ್ದಾರೆ.

ಹೊಸ ಬದುಕಿಗೆ ಕಾಲಿಟ್ಟ ನವಜೋಡಿ ಹೊಸ ಮನೆಗೆ ತೆರಳಿ ಹೊಸ ಜೀವನ ಆರಂಭಿಸಲಿದ್ದಾರೆ. ವಿಕ್ಕಿ- ಕತ್ರಿನಾ ಜೋಡಿ ಮುಂಬೈಗೆ ಮರುಳಿದ ಮೇಲೆ ಸಮುದ್ರ ತೀರದಲ್ಲಿರುವ ಜುಹು ಫ್ಲಾಟ್‌ಗೆ ತೆರಳಲಿದ್ದಾರೆ. ಅಂದಹಾಗೆ ಇನ್ನೊಂದು ಸ್ಟಾರ್​ ದಂಪತಿ ಕೂಡ ಇದೇ ಸದ್ಯ ಇದೇ ಪ್ಲಾಟ್​ನಲ್ಲಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ಅನುಷ್ಕ ಶರ್ಮಾ ಕೂಡ ಜುಹು ಫ್ಲಾಟ್‌ನಲ್ಲಿದ್ದು, ಇನ್ಮುಂದೆ ಈ ಸ್ಟಾರ್​ ದಂಪತಿಗಳು ನೆರೆಹೊರೆಯವರಾಗಲಿದ್ದಾರೆ.

ಕತ್ರಿನಾ ಕೈಫ್​ ಹಾಗೂ ನಟ ವಿಕ್ಕಿ ಕೌಶಲ್ ಅವರ ಹೊಸ ಪ್ಲಾಟ್ ಎನ್ನಲಾದ​ ವಿಡಿಯೋ ವೈರಲ್​ ಆಗಿದೆ. ಈ ಪ್ಲಾಟ್​ ಸಮೀಪವೇ ಸಮುದ್ರವಿದ್ದು, ವಾವ್​ ಎನ್ನುವಂತಿದೆ. ಇನ್ನು ಅಪಾರ್ಟ್​ಮೆಂಟ್​ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ವಿಕ್ಕಿ- ಕತ್ರಿನಾ ಜೋಡಿ ಹೊಸ ಮನೆಗೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.

 

View this post on Instagram

 

A post shared by Viral Bhayani (@viralbhayani)

Latest article