ಸೀತಾ ಚಿತ್ರಕ್ಕಾಗಿ 12ಕೋಟಿ ಸಂಭಾವನೆ ಕೇಳಿ ಸುದ್ದಿಯಾಗಿದ್ದ ಕರೀನಾ.. 12ಕೋಟಿ ಕೇಳಿದ್ದರ ಹಿಂದಿನ ನಿಜ ಕಾರಣ ಬಿಚ್ಚಿಟ್ಟಿದ್ದಾರೆ..

ಸೀತಾ ಚಿತ್ರಕ್ಕಾಗಿ 12ಕೋಟಿ ಸಂಭಾವನೆ ಕೇಳಿ ಸುದ್ದಿಯಾಗಿದ್ದ ಕರೀನಾ.. 12ಕೋಟಿ ಕೇಳಿದ್ದರ ಹಿಂದಿನ ನಿಜ ಕಾರಣ ಬಿಚ್ಚಿಟ್ಟಿದ್ದಾರೆ..
Kareena Kapoor

ಮುಂಬೈ: ಬಾಲಿವುಡ್​ ನಟಿ ಕರೀನಾ ಕಪೂರ್ ಖಾನ್ ಕೆಲವು ದಿನಗಳ ಹಿಂದೆ ಸಂಭಾವನೆ ವಿಚಾರದಲ್ಲಿ ಬಹಳಷ್ಟು ಸುದ್ದಿಯಾಗಿದ್ದರು. ಇದೀಗ, ಸಂಭಾವನೆ ವಿಚಾರದ ಬಗ್ಗೆ ಕರೀನಾ ಸ್ಪಷ್ಟನೆ ನೀಡಿದ್ದಾರೆ.

ನಟಿ ಕರೀನಾ ಕಪೂರ್ ಅವರು ನಿರ್ದೇಶಕ ಅಲೌಕಿಕ ದೇಸಾಯಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ‘ಸೀತಾ’ ​​ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರದ ನಟನೆಗಾಗಿ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆಯ ಡಿಮ್ಯಾಂಡ್ ಇಟ್ಟಿದ್ದರು ಎಂದು ಇತ್ತೀಚೆಗೆ ವರದಿಯಾಗಿತ್ತು.

ಈ ಬಗ್ಗೆ ಕರೀನಾ ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ಸಂಭಾವನೆ ಏರಿಕೆ ಬಗ್ಗೆ ಕಾರಣ ನೀಡಿದ್ದಾರೆ. ಹಲವು ವರ್ಷಗಳಿಂದ ನಟಿ- ನಟರಿಗೆ ಸಮ ಸಂಭಾವನೆ ನೀಡುತ್ತಿಲ್ಲ. ಹಲವು ದಶಕಗಳಿಂದ ಈ ತಾರತಮ್ಯ ಇದೆ. ಈ ಬಗ್ಗೆ ಯಾರೂ ಧ್ವನಿ ಎತ್ತಿಲ್ಲ. ಆದರೆ, ನಾನು ಮಾತ್ರ ಸಂಭಾವನೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದೇನೆ. ಇದು ನನ್ನ ಬೇಡಿಕೆಯಲ್ಲ. ಇದು ಮಹಿಳೆಯರಿಗೆ ನೀಡುವ ಗೌರವ. ಮುಂದಿನ ದಿನಗಳಲ್ಲಿ ಬದಲಾವಣೆಯಾಗಬೇಕೆಂದು ಭಾವಿಸಿ ಧ್ವನಿ ಎತ್ತಿದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು, ಸೀತಾ ಪಾತ್ರದಲ್ಲಿ ಕರೀನಾ ನಟಿಸಲು 8ರಿಂದ 10 ತಿಂಗಳ ಕಾಲ ತರಬೇತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಈವರೆಗಿನ ಕರೀನಾ ಸಿನಿ ಕರಿಯರ್​ನಲ್ಲೇ ಈ ಪೌರಾಣಿಕ ಚಿತ್ರ ಅತೀ ದೊಡ್ಡ ಬಜೆಟ್​ ಸಿನಿಮಾ ಎಂದೇ ಹೇಳಲಾಗುತ್ತಿದೆ.

Related Stories

No stories found.
TV 5 Kannada
tv5kannada.com