Wednesday, June 29, 2022

ಗೋವಾದಲ್ಲಿ ನಟ ದಿಗಂತ್​ಗೆ ಗಂಭೀರ ಗಾಯ: ಕೆಲವೇ ಗಂಟೆಗಳಲ್ಲಿ ಬೆಂಗಳೂರಿಗೆ ಏರ್​ಲಿಫ್ಟ್​​

Must read

ಗೋವಾದಲ್ಲಿ ಸ್ಯಾಂಡಲ್​ವುಡ್​ ನಟ ದಿಗಂತ್​ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕುಟುಂಬ ಸಮೇತರಾಗಿ ಗೋವಾ ಪ್ರವಾಸಕ್ಕೆ ತೆರಳಿದ್ದ ದಿಗಂತ್​ ಸಮುದ್ರ ತಟದಲ್ಲಿ ಸ್ಟಂಟ್​ ಮಾಡುವಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ನಟ ದಿಗಂತ್​ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವ ಕಾರಣ ಕುಟುಂಬಸ್ಥರು ಕೆಲವೇ ಗಂಟೆಗಳಲ್ಲಿ ಏರ್​ಲಿಪ್ಟ್ ಮೂಲಕ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಕರೆ ತರಲಿದ್ದಾರೆ.

ಸದ್ಯ ದಿಗಂತ್ ಅವರಿಗೆ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ನಟನ ಆಪ್ತರು ಮಾಹಿತಿ ನೀಡಿದ್ದಾರೆ.

Latest article