ತೆಲುಗಿನ ಖ್ಯಾತ ನಟಿ ಕಾಜಲ್ ಅಗರವಾಲ್ ಅವರು ಕಳೆದ ಏಪ್ರಿಲ್ 19 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಯಾವುದೇ ಫೋಟೊಗಳನ್ನು ಹಂಚಿಕೊಂಡಿರಲಿಲ್ಲ.
ಕಾಜಲ್ ಅಭಿಮಾನಿಗಳಂತೂ ಮಗು ಫೋಟೋ ನೋಡೋದಕ್ಕೆ ಕುತೂಹಲದಿಂದ ಕಾದು ಕುಳಿತಿದ್ದರು.. ಇದೀಗ ಕಾಜಲ್ ಅಮ್ಮಂದಿರ ದಿನದ ಪ್ರಯುಕ್ತ ತಮ್ಮ ಮುದ್ದಾದ ಮಗು ನೀಲ್ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಫೋಟೊದ ಜೊತೆ ಜೊತೆಗೆ ಭಾವನಾತ್ಮಕ ಸಂದೇಶವೊಂದನ್ನು ಹಾಕಿಕೊಂಡಿರುವ ಕಾಜಲ್, ಮಗು ಪಡೆದ ನಾನು ತಾಯ್ತನದ ಖುಷಿಯನ್ನು ಬಣ್ಣಿಸಲು ಆಗುತ್ತಿಲ್ಲ. ಮಗು ನೀನೇ ನನಗೆ ಎಲ್ಲ. ನಾನೇ ನಿನಗೆ ಎಲ್ಲ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸದ್ಯ ಸಿನಿಮಾಗಳಿಂದ ಕೊಂಚ ವಿರಾಮ ಪಡೆದಿರುವ ಕಾಜಲ್, ಎಸ್. ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾದಲ್ಲಿ ನಟ ಕಮಲ ಹಾಸನ್ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.