Sunday, October 2, 2022

ಹುಬ್ಬಳ್ಳಿ ಸ್ವರ್ಗಕ್ಕೆ ಸಮಾನ: ನಟ ಶರಣ್

Must read

ಹುಬ್ಬಳ್ಳಿ: ಇದು ನಾನು ಹುಟ್ಟಿ ಬೆಳದ ಊರು, ನನ್ನ ಚಿಕ್ಕ ವಯಸ್ಸಿನ್ನು ಕಳೆದ ಊರು, ಇಂಥ ಹುಬ್ಬಳ್ಳಿ ನನಗೆ ಸ್ವರ್ಗಕ್ಕೆ ಸಮಾನ. ಹುಬ್ಬಳ್ಳಿ ಊಟ, ಇಲ್ಲಿನ ಮಾತನ್ನು ಕೇಳ್ತಿದ್ದರೆ ನನ್ನ ಮೈಯಲ್ಲ ರೋಮಾಂಚನವಾಗುತ್ತದೆಂದು ನಟ ಶರಣ್ ಗಂಡು ಮಟ್ಟಿನ ನಾಡು ಹುಬ್ಬಳ್ಳಿಯನ್ನು ಹಾಡಿ ಹೊಗಳಿದ್ದಾರೆ. ತಮ್ಮ ನಟನೆಯ ‘ಗುರು ಶಿಷ್ಯರು’ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ನಟ ಶರಣ್ ಗುರು ಶಿಷ್ಯರು ಚಿತ್ರ ನಾನು ಇಷ್ಟ ಪಟ್ಟು ಮಾಡಿದ ಸಿನಿಮಾವಿದು. ಹಳೇಯ ಆಟಗಳನ್ನು ನಾವು ಮರೆಯುತ್ತಿದ್ದೇವೆ. ಆ ಆಟಗಳು ಎಷ್ಟೊಂದು ಜೋಶ್ ತರುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಿದೆ. ಇದೆ ಸೆಪ್ಟೆಂಬರ್ 23ಕ್ಕೆ ಇಡೀ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸಾಕಷ್ಟು ಜನರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂದರು.
ಇದೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ನಿಶ್ವಿಕಾ ನಾನು ಸೂಜಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿದ್ದು, ಅದರಲ್ಲೂ ‘ಆಣೆ ಮಾಡು ಹೇಳುತ್ತೀನಿ’ ಹಾಡು ಎಲ್ಲರ ಮನಸ್ಸಲ್ಲಿ ಉಳಿದಿದ್ದು ಸಂತಸ ತಂದಿದೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು.

Latest article