ಜಾಲಿ ಮೂಡ್​​ನಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್..!

ಜಾಲಿ ಮೂಡ್​​ನಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್..!
Golden Star Ganesh at Kabini

ಗೋಲ್ಡನ್​ ಸ್ಟಾರ್​ ಗಣಿ ಬ್ಯಾಕ್​ ಟು ಬ್ಯಾಕ್​​ ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿ..ಸದ್ಯ ಶೂಟಿಂಗ್​​ಗೆ ಬ್ರೇಕ್ ಕೊಟ್ಟು ಫ್ಯಾಮಿಲಿ ಜೊತೆ ಟ್ರಿಪ್​ ಮಾಡ್ತಿದ್ದಾರೆ ಗಣಿ..ಆ ಜಾಲಿ ರೈಡ್​ ವಿಡಿಯೋಸ್​ನ್ನ ಸ್ವತ: ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ..

ಗೋಲ್ಡನ್​ ಸ್ಟಾರ್ ಗಣೇಶ್​ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ..ಕೊರೊನಾ ಲಾಕ್​ಡೌನ್​ನಿಂದ ಶೂಟಿಂಗ್​ಗೆ ಗ್ಯಾಪ್​ ಕೊಟ್ಟಿದ್ದ ಗಣಿ ಆ ನಂತ್ರ ಬ್ಯಾಲೆನ್ಸ್​ ಇದ್ದ ಚಿತ್ರಗಳ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ರು..ಬಿಡುವಿಲ್ಲದೆ ಶೂಟಿಂಗ್​ ಮಾಡ್ತಾ ಇದ್ರು..ಇದೀಗ ಚಿತ್ರೀಕರಣಕ್ಕೆ ಕೊಂಚ ಬ್ರೇಕ್​ ಕೊಟ್ಟು ಫ್ಯಾಮಿಲಿ ಜೊತೆ ಟ್ರಿಪ್​ ಹೊರಟಿದ್ದಾರೆ..

ಯೆಸ್.. ಫ್ಯಾಮಿಲಿ ಅಂಡ್​ ಫ್ರೆಂಡ್ಸ್​ ಜೊತೆ ಕಬಿನಿ ಜಲಾಶಯಕ್ಕೆ ಭೇಟಿ ಕೊಟ್ಟಿದ್ರು ಗಣಿ.. ಇದೇ ಟೈಮ್​ನಲ್ಲಿ ಕಾಡಿಗೆ ಸಫಾರಿಗೆ ಹೋಗಿದ್ದ ಗಣಿ ಚಿರತೆಯನ್ನು ನೋಡಿ ಥ್ರಿಲ್​ ಆಗಿದ್ದಾರೆ..ಸಫಾರಿಯಲ್ಲಿ ತಮಗೆ ಎದುರಾದ ಚಿರತೆಯ ವಿಡಿಯೋ ಕೂಡ ಮಾಡಿದ್ದಾರೆ.. ಹಾಗೂ ಚಿರತೆಯನ್ನ ಮಗ ವಿಹಾನ್​ಗೆ ತೋರಿಸುತ್ತಿರುವ ವಿಡಿಯೋ ಸಹ ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ..

ಒಟ್ನಲ್ಲಿ ಗಣಿ ಕಬಿನಿ ಜಲಾಶಯಕ್ಕೆ ಭೇಟಿ ಕೊಟ್ಟು, ಪ್ರಕೃತಿ ಮಡಿಲಿನಲ್ಲಿ ಕೆಲ ಸಮಯ ಕಳೆದಿದ್ದಾರೆ..ವನ್ಯ ಜೀವಿಗಳನ್ನ ಕಂಡು ಖುಷಿ ಪಟ್ಟಿದ್ದಾರೆ..

ಅರ್ಚನಾಶರ್ಮಾ,ಎಂಟರ್​ಟೈನ್ಮೆಂಟ್​ ಬ್ಯುರೋ,ಟಿವಿ5

Related Stories

No stories found.
TV 5 Kannada
tv5kannada.com