Tuesday, October 26, 2021

ಬಣ್ಣದ ಬದುಕಿಗಾಗಿ ‘ಹಿಂದೂ’ವಾಗಿ ಬದಲಾದ ಪ್ರಸಿದ್ಧ ಕಲಾವಿದರಿವರು

Must read

ಮೊಹಮ್ಮದ್ ಯೂಸೂಫ್ ಖಾನ್ ಎಂದರೆ ಯಾರಿಗೂ ಕೂಡ ಗೊತ್ತಾಗೋದಿಲ್ಲ .ಆದ್ರೆ ದಿಲೀಪ್ ಕುಮಾರ್ ಎಂದಾಗ ಸೂಪರ್ ಸ್ಟಾರ್ ನೆನಪಾಗ್ತಾರೆ. ಹೌದು ದಿಲೀಪ್ ಕುಮಾರ್ ನಿಜವಾದ ಹೆಸರು ಮೊಹಮ್ಮದ್ ಯೂಸೂಫ್ ಖಾನ್ .ಚಿತ್ರದಲ್ಲಿ ಮಿಂಚಬೇಕೆಂಬ ಆಕಾಂಕ್ಷೆಯಿಂದ ಯೂಸೂಫ್ ಖಾನ್ ದಿಲೀಪ್ ಕುಮಾರ್ ಆಗಿ ಹೆಸರು ಬದಲಾಯಿಸಿ ದಂತಕಥೆಯೇ ಆದ್ರು..ನಂತರ ನಡೆದಿದ್ದು ಇತಿಹಾಸವೇ ಸರಿ ..

ದಿಲೀಪ್ ಕುಮಾರ್ ಹೊರತಾಗಿ, ಶೋಲೆ ಚಿತ್ರದಲ್ಲಿ ಸೂರ್ಯ ಭೂಪಾಲಿ ಪಾತ್ರದಲ್ಲಿ ನಟಿಸಿರುವ ಜಗದೀಪ್ ಕೂಡ ಮುಸ್ಲಿಂ. ಅವರ ನಿಜವಾದ ಹೆಸರು ಸೈಯದ್ ಇಷ್ತಿಯಾಕ್ ಅಹ್ಮದ್ ಜಾಫ್ರಿ. ಜಗದೀಪ್ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ತಮ್ಮ ಪಾತ್ರದಿಂದ ಜನರನ್ನು ರಂಜಿಸಿದರು. ಅವರ ಹೆಸರು ತುಂಬಾ ಉದ್ದವಾಗಿತ್ತು ಮತ್ತು ಹೀಗಾಗಿ ಚಲನಚಿತ್ರಗಳಿಗಾಗಿ ತಮ್ಮ ಹೆಸರನ್ನು ಬದಲಾಯಿಸಿದರು. ಜುಲೈ 8ರಂದು ಅವರು ನಿಧನರಾಗಿದ್ದರು.

ಮಧುಬಾಲಾ ಸ್ಮೈಲಿಂಗ್ ಸ್ಟಾರ್ , ಅವರ ನಗುವನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಆಕೆಯ ನಿಜವಾದ ಹೆಸರು ಮುಮ್ತಾಜ್ ಜಹಾನ್ ಡೆಹ್ಲ್ವಿ. ಚಲನಚಿತ್ರಗಳಲ್ಲಿ ಯಶಸ್ಸು ಪಡೆಯಲು ಅವರು ತಮ್ಮ ಹೆಸರನ್ನು ಬದಲಾಯಿಸಿದರು. ಆದರೆ ಅವರು ಇಂದು ನಮ್ಮೊದಿಗಿಲ್ಲ.

ಟ್ರ್ಯಾಜಿಡಿ ಕ್ವಿನ್ ಎಂದೆ ಹೆಸರುವಾಸಿಯಾಗಿದ್ದ ಮೀನಾ ಕುಮಾರಿ ಕೂಡ ಹಿಂದೂ ಅಲ್ಲ ಮುಸ್ಲಿಂ. ಅವರ ನಿಜವಾದ ಹೆಸರು ಮೆಹಜಬೀನ್ ಬಾನೊ. ಅವರು ಪರದೆಯ ಮೇಲೆ ಹೆಸರನ್ನು ಮಾಡಲು ತಮ್ಮ ಮೂಲ ಹೆಸರನ್ನು ಬದಲಾಯಿಸಿದರು. ಅಂದಿನ ಪ್ರತಿಯೊಬ್ಬ ಯುವಕರ ಹೃದಯವನ್ನ ತಟ್ಟಿದ ಸುಂದರಿಯರಲ್ಲಿ ಒಬ್ಬಳು ‌ಮೀನಾ ..

ನಟಿ ರೀನಾ ರಾಯ್ ಕೂಡ ಮುಸ್ಲಿಂ ಧರ್ಮದವರೇ. ಬಾಲಿವುಡ್ ನಲ್ಲಿ ಹೆಸರು ಮಾಡಬೇಕೆಂದು ಅವರ ತಾಯಿ ಅವರ ಹೆಸರು ಬದಲಾಯಿಸಿದರು. ಆಕೆಯ ನಿಜವಾದ ಹೆಸರು ಸೈರಾ ಅಲಿ. ರೀನಾ ಸದ್ಯ ಚಿತ್ರಗಳಲ್ಲಿ ಸಕ್ರಿಯವಾಗಿಲ್ಲ. ಆಕೆ 2000 ದಲ್ಲಿ ನಿರಾಶ್ರಿತ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಳು.

ಹಿಂದಿನ ಕಾಲದ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿರುವ ಅಜಿತ್ ರವರು ವಾಸ್ತವವಾಗಿ ಹಿಂದೂ ಅಲ್ಲ ಮುಸ್ಲಿಂ. ಅವರ ನಿಜವಾದ ಹೆಸರು ಹಮೀದ್ ಖಾನ್ ಅಲಿ.

Also read:  ನೃತ್ಯ ಕಲಾವಿದರ ಕಷ್ಟಕ್ಕೆ ನಿಖಿಲ್​ ಕುಮಾರಸ್ವಾಮಿ ಸಹಾಯ ಹಸ್ತ

ಹಳೆಯ ಚಲನಚಿತ್ರಗಳಲ್ಲಿ ಖಳನಾಯಕರಾಗಿ ಕೆಲಸ ಮಾಡುತ್ತಿದ್ದ ಜಾನಿ ವಾಕರ್ ರವರು ಮುಸ್ಲಿಂ ಹಿಂದೂ ಅಲ್ಲ. ಅವರ ನಿಜವಾದ ಹೆಸರು ಬಹರುದ್ದೀನ್ ಜಮಾಲುದ್ದೀನ್ ಖಾಜಿ. ಬಹು ದಿನದ ಹಿಂದೆಯೇ ಜಾನಿ ನಮ್ಮನ್ನಗಲಿದ್ದಾರೆ

ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ತಾ ಕೂಡ ಹಿಂದೂ ಅಲ್ಲ, ಅವಳು ಕೂಡಾ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಅವರ ನಿಜವಾದ ಹೆಸರು ದಿಲ್ನಾವಾಜ್ ಶೇಖ್. ಕೆಲವೇ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ ಮಾನ್ಯತಾ, ಪರದೆಗಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡಳು.

ಮನೋಜ್ ಬಾಜಪೇಯಿ ಅವರ ಪತ್ನಿ ನೇಹಾ ಕೂಡ ಮುಸ್ಲಿಂ. ಅವಳ ನಿಜವಾದ ಹೆಸರು ಶಬಾನಾ ರಾಜಾ. ನೇಹಾ ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಇದ್ದಕ್ಕಿದ್ದಂತೆ ಕಣ್ಮರೆಯಾದರು. ಆಕೆಗೆ ಬಾಲಿವುಡ್‌ನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ.

Also read:  8 ದಿನದಲ್ಲಿ ಬಾಕ್ಸಾಫೀಸ್​​​ ಚಿಂದಿ ಉಡಾಯಿಸಿದ ದಳಪತಿ

ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಸಂಜಯ್ ಖಾನ್ ಅವರ ನಿಜವಾದ ಹೆಸರು ಶಾ ಅಬ್ಬಾಸ್ ಖಾನ್. ಅವರು ಚಲನಚಿತ್ರಗಳಿಗಾಗಿ ತಮ್ಮ ಹೆಸರನ್ನು ಬದಲಾಯಿಸಿದರು. ಸಂಜಯ್ ಕೂಡ ಬಹಳ ಸಮಯದಿಂದ ಬೆಳ್ಳಿತೆರೆಯಿಂದ ದೂರವಾಗಿದ್ದಾರೆ.

More articles

Latest article