ಅಣ್ಣನನ್ನು ನೆನೆದು ಧ್ರುವ ಸರ್ಜಾ ಭಾವುಕ..! ನಿನ್ನನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ ಎಂದ ಧ್ರುವ..!

ಅಣ್ಣನನ್ನು ನೆನೆದು ಧ್ರುವ ಸರ್ಜಾ ಭಾವುಕ..! ನಿನ್ನನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ ಎಂದ ಧ್ರುವ..!

ಸ್ಯಾಂಡಲ್​ವುಡ್​ನ ಯುವ ಸಾಮ್ರಾಟ್​ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ರೂ, ಅವರ ನೆನಪು ಸದಾ ಹಸಿರು. ಸರ್ಜಾ ಕುಟುಂಬಕ್ಕಾಗಲಿ, ಅಥವಾ ಮೇಘನಾ ರಾಜ್ ಕುಟುಂಬಕ್ಕಾಗಲಿ ಚಿರು ಅಗಲಿಕೆಯ ನೋವು ಇನ್ನೂ ಮಾಸಿಲ್ಲ. ಧ್ರುವ ಸರ್ಜಾ ಅಂತೂ ಪ್ರತಿ ಬಾರಿ ಚಿರು ಹೆಸರು ಕೇಳಿದಾಗ ಭಾವುಕರಾಗುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಿರು ಜೊತೆಗಿನ ವಿಡಿಯೋ ಶೇರ್​ ಮಾಡಿರುವ ಧ್ರುವ ತಮ್ಮ ಮನಸ್ಸಿನ ನೋವನ್ನು ಹೊರಹಾಕಿದ್ದಾರೆ. ಈ ಬಗ್ಗೆ​ ಡೀಟೈಲ್ಸ್​ ಇಲ್ಲಿದೆ.

ಚಿರಂಜೀವಿ ಸರ್ಜಾ ಹೇಗೆ ಅಪಾರ ಅಭಿಮಾನಿಗಳಿಗೆ ನೆಚ್ಚಿನ ನಟನೋ, ಹಾಗೇ ಮನೆಯ ಮೆಚ್ಚಿನ ಮಗ. ಎರಡೂ ಕುಟುಂಬಗಳಿಗೆ ಚಿರು ಅಂದ್ರೇನೇ ಖುಷಿ ಎನ್ನುವಷ್ಟು ಚಿರು ಎಲ್ಲರಿಗೂ ಆತ್ಮೀಯರು. ಇನ್ನು ಧ್ರುವ ಸರ್ಜಾ ಹಾಗೂ ಚಿರು ಬಾಂಧವ್ಯವಂತೂ ಜನ ಮೆಚ್ಚಿ ಜಗ ಮೆಚ್ಚುವಂತಿತ್ತು. ಅಣ್ಣ-ತಮ್ಮ ಅಂದ್ರೆ ಹೀಗಿರ ಬೇಕು ಎನ್ನುವಷ್ಟರ ಮಟ್ಟಿಗೆ ಇವರಿಬ್ಬರು ಚಂದನವನದ ಚೆಂದದ ಸಹೋದದರು. ಆದರೆ ಅದ್ಯಾವ ಮಸಣಿ ಕಣ್ಣು ಬಿತ್ತೋ, ಚಿರು ತನ್ನವರೆಲ್ಲರನ್ನೂ ಬಿಟ್ಟು ಇಹಲೋಕದ ಪಯಣ ಮುಗಿಸಿ ಹೊರಟೇ ಬಿಟ್ಟರು. ಚಿರು ಅಗಲಿಕೆಗೆ ಒಂದು ವರ್ಷವಾದ್ರೂ ಅವರ ನೆನಪು ಧ್ರುವರನ್ನಾ ಕಾಡುತ್ತಲೇ ಇದೆ.

ಅಣ್ಣನೊಂದಿಗಿನ ನೆನಪುಗಳಿಗೆ ವಿಡಿಯೋ ರೂಪಕೊಟ್ಟು ಅದನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಧ್ರುವ ಮಿಸ್​ ಯೂ ಚಿರು. ನಿನ್ನನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ವಿಡಿಯೋದಲ್ಲಿ ಬಾಲ್ಯದಿಂದ ಹಿಡಿದು ಚಿರು ನಿಧನದವರೆಗೂ ಅಣ್ಣ-ತಮ್ಮ ಜೊತೆಯಾಗಿ ಕಳೆದ ಅನೇಕ ಕ್ಷಣಗಳನ್ನು ಒಗ್ಗೂಡಿಸಲಾಗಿದ್ದು, ನೋಡುಗರ ಕಣ್ಣು ತುಂಬಿ ಬರುವಂತಿದೆ.

ಇನ್ನು ಇತ್ತೀಚಿಗಷ್ಟೇ ಚಿರು ​ ಪುತ್ರನ ನಾಮಕರಣ ಅದ್ಧೂರಿಯಾಗಿ ನೆರವೇರಿದ್ದು, ರಾಜ್​-ಸರ್ಜಾ ಕುಟುಂಬದ ಮುದ್ದಿನ ಮೊಮ್ಮಗನಿಗೆ ರಾಯನ್ ರಾಜ್​ ಸರ್ಜಾ ಎಂದು ಹೆಸರಿಡಲಾಯಿತು. ಪ್ರೀತಿಯ ಅಣ್ಣನ ಮಗನ ಹೆಸರನ್ನು ಧ್ರುವ ಅಷ್ಟೇ ಸಂಭ್ರಮದಿಂದ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಒಟ್ಟಿನಲ್ಲಿ ಅಣ್ಣನ ನೆನಪು, ಅವರ ಕನಸುಗಳೊಂದಿಗೆ ದಿನ ಕಳೆಯುತ್ತಿರುವ ಧ್ರುವ ಸರ್ಜಾ ಮನದೊಳಗಿನ ನೋವು ಕಡಿಮೆಯಾಗಲಿ ಎನ್ನುವುದು ಅವರ ಅಭಿಮಾನಿಗಳ ಪ್ರಾರ್ಥನೆ.

ಮಲ್ಲಿಕಾ ಪೂಜಾರಿ, ಎಂಟರ್​ಟೈನ್ಮೆಂಟ್​ ಬ್ಯೂರೋ ಟಿ.ವಿ5

Related Stories

No stories found.
TV 5 Kannada
tv5kannada.com