ಕಂಗನಾಗೆ ಅರೆಸ್ಟ್ ವಾರಂಟ್ ಎಚ್ಚರಿಕೆ ನೀಡಿದ ಕೋರ್ಟ್...!

ಕಂಗನಾಗೆ ಅರೆಸ್ಟ್ ವಾರಂಟ್ ಎಚ್ಚರಿಕೆ ನೀಡಿದ ಕೋರ್ಟ್...!

ಖ್ಯಾತ ಕಲಾವಿದ ಜಾವೇದ್ ಅಖ್ತರ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ, ಕಂಗನಾ ರನೌತ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗುವುದು ಎಂದು ಮುಂಬೈ ನ್ಯಾಯಾಲಯ ಎಚ್ಚರಿಸಿದೆ.

ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20ರಂದು ಆದೇಶಿಸಲಾಗಿದೆ. ಒಂದು ವೇಳೆ ಕಂಗನಾ ಆ ದಿನಾಂಕದಂದು ಹಾಜರಾಗಲು ವಿಫಲವಾದರೆ ಆಕೆಯ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಆದಾಗ್ಯೂ, ಕಂಗನಾ ಅವರ ಪರ ವಕೀಲ ರಿಜ್ವಾನ್ ಸಿದ್ದಿಕ್ ಅವರು ಕಂಗನಾ ಅವರ ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದು, ನಟಿ ಕಂಗನಾ ಕಳೆದ 15 ದಿನಗಳಲ್ಲಿ ಕಂಗನಾ ತಲೈವಿ ಪ್ರಚಾರಕ್ಕಾಗಿ ಸಾಕಷ್ಟು ಪ್ರಯಾಣಿಸಿದ್ದಾರೆ. ಜೊತೆಗೆ ಬಹಳಷ್ಟು ಜನರನ್ನು ಭೇಟಿ ಮಾಡಿದ್ದಾರೆ.

ಅವರಿಗೆ ಕೋವಿಡ್-19 ರೋಗ ಲಕ್ಷಣಗಳಿವೆ. ಕಂಗನಾ ಚೇತರಿಸಿಕೊಳ್ಳಲು ಮತ್ತು ಕೋವಿಡ್-19 ಪರೀಕ್ಷೆಯನ್ನು ಸಹ ತೆಗೆದುಕೊಳ್ಳುವಂತೆ ರಿಜ್ವಾನ್​ ನ್ಯಾಯಾಲಯದಿಂದ ಏಳು ದಿನಗಳ ಸಮಯವನ್ನು ಕೇಳಿದರು. ವರ್ಚುವಲ್ ಮೂಲಕವೂ ಕಂಗನಾ ಹಾಜರಾಗಬಹುದು ಎಂದು ಅವರು ಹೇಳಿದರು.

Related Stories

No stories found.
TV 5 Kannada
tv5kannada.com