Friday, January 21, 2022

ದೇವರೆ ಇದು ಅನ್ಯಾಯ: ಸಮನ್ವಿ ಸಾವಿಗೆ ಕಂಬನಿ ಮಿಡಿದ ಅನು ಪ್ರಭಾಕರ್..!

Must read

ಬೆಂಗಳೂರು: ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಶೋ ಸ್ಪರ್ಧಿ ಸಮನ್ವಿ(6) ಮೃತಪಟ್ಟಿದ್ದಾರೆ.

ಸಮನ್ವಿ, ತಮ್ಮ ತಾಯಿ ಅಮೃತ ನಾಯ್ಡು ಅವರೊಂದಿಗೆ ಸ್ಕೂಟರ್​ನಲ್ಲಿ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳುತ್ತಿದ್ದಾಗ ಅತಿ ವೇಗದಿಂದ ಬಂದ ಟಿಪ್ಪರ್​ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಸಮನ್ವಿ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ತನ್ನ ತುಂಟತನ, ಪಟಾಪಟ್​​ ಮಾತು, ಕ್ಯೂಟ್​​..ಕ್ಯೂಟ್ ನಡವಳಿಕೆಯಿಂದ ಎಲ್ಲರ ಮನಗೆದ್ದಿದ್ದಳು. ಈ ರಿಯಾಲಿಟಿ ಶೋನ ತೀರ್ಪುಗಾರರಾದ ಅನು ಪ್ರಭಾಕರ್​​ ಸಮನ್ವಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಭಾವುಕ ಪೋಸ್ಟ್​ ಹಾಕಿರುವ ಅನು ಪ್ರಭಾಕರ್,​​ ನನ್ನನ್ನು ಪ್ರೀತಿಯಿಂದ Cherry judge ಅಂತ ಕರೆಯುತಿದ್ದ ಕಂದಮ್ಮ ಸಮನ್ವಿ.. ವಿಧಿ ಆಟ.. ದೇವರೆ ಇದು ಅನ್ಯಾಯ ಎಂದು ಬರೆದುಕೊಂಡಿದ್ದಾರೆ.

Latest article