Monday, November 29, 2021

ವಿಚಾರಣೆಗೆ ತಡವಾಗಿ ಬಂದ ನಟಿಗೆ NCB ಕ್ಲಾಸ್

Must read

ಆರ್ಯನ್ ಜೊತೆ ಅನನ್ಯಾ ಚಾಟ್ ಹಿಸ್ಟ್ರೀ ಪ್ರಮುಖ ಸಾಕ್ಷಿಯಾಗಿರುವುದರಿಂದ ನಟಿ ಅನನ್ಯಾ ಮನೆ ಮೇಲೂ ದಾಳಿ ನಡೆಸಿದ್ದ ಎನ್ ಸಿಬಿ ಇದೀಗ ಮೂರನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಅನನ್ಯಾಳಿಗೆ ನೋಟಿಸ್ ನೀಡಿದೆ. ಎರಡು ದಿನಗಳ ವಿಚಾರಣೆಯ ನಂತರ ಇಂದು ಮತ್ತೆ ಅನನ್ಯಾ ವಿಚಾರಣೆ ಎದುರಿಸಬೇಕಿದೆ ,ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಟಿ ಅನನ್ಯಾ ಪಾಂಡೆ ಪಾತ್ರವೇನು ಅನ್ನೋದು ಸದ್ಯ ಗೌಪ್ಯವಾಗಿದೆ ಆರ್ಯನ್ ಜೊತೆನಡೆಸಿದ ಸಂಬಾಷಣೆ ಇದೀಗ ನಟಿಗೆ ಕುಣಿಕೆಯಾಗಿ ಪರಿಣಮಿಸಿದೆ.

ಗುರುವಾರ ಮತ್ತು ಶುಕ್ರವಾರ, ಎನ್‌ಸಿಬಿ ಅನನ್ಯಳನ್ನು ಕ್ರಮವಾಗಿ ಎರಡು ಮತ್ತು ನಾಲ್ಕು ಗಂಟೆಗಳ ಕಾಲ ವಿಚಾರಿಸಿತು ಶುಕ್ರವಾರ ತಡವಾಗಿ ಬಂದಿದ್ದಕ್ಕಾಗಿ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಅನನ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅನನ್ಯಾ 11 ಗಂಟೆಗೆ ಎನ್‌ಸಿಬಿ ಕಚೇರಿಗೆ ಬರಬೇಕಿತ್ತು ಆದರೆ ನಟಿ 2 ಗಂಟೆಗೆ ತಲುಪಿದ್ದರು ಈ ವೇಳೆ ಅನನ್ಯಾ ತಂದೆ ನಟ ಚಂಕಿ ಪಾಂಡೆ ಕೂಡ ಎನ್‌ಸಿಬಿ ಕಚೇರಿಯಲ್ಲಿ ಹಾಜರಿದ್ದರು.

ಅನನ್ಯ-ಆರ್ಯನ್ ನಡುವೆ ಏನಾಯಿತು

NCB ವಿಚಾರಣೆಯಲ್ಲಿ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಅನನ್ಯಾಗೆ ಕೇಳಲಾಯಿತು ವಾಸ್ತವವಾಗಿ ಅನನ್ಯ ಮತ್ತು ಆರ್ಯನ್ ನಡುವೆ ಕೆಲವು ಚಾಟ್‌ಗಳು ನಡೆದಿವೆ ಇದರಲ್ಲಿ ಡ್ರಗ್‌ಗಳ ವಹಿವಾಟಿನ ಬಗ್ಗೆ ಸಾಕ್ಷ್ಯವಿದೆ ಅನನ್ಯ ಪಾಂಡೆಗೆ ಸಂಬಂಧಿಸಿದ ಮೂರು ಚಾಟ್‌ಗಳು 2018 ರಿಂದ 2019 ರವರೆಗಿನವು ಈ ಚಾಟ್‌ಗಳು ಗಾಂಜಾ ಬಗ್ಗೆ ಸುಳಿವು ನೀಡುತ್ತಿದೆ.

Latest article