Tuesday, August 16, 2022

ನುಡಿದಂತೆ ನಡೆದ ಐಕಾನ್​​ ಸ್ಟಾರ್: ಪುನೀತ್​​ ರಾಜ್​​ಕುಮಾರ್​​ಗೆ ‘ಪುಷ್ಪ‘ ನಮನ

Must read

ಅಪ್ಪು ಅಗಲಿಕೆ ಬರೀ ರಾಜ್ಯಕ್ಕಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ.  ಅದೆಷ್ಟೋ ಮಕ್ಕಳ ಪಾಲಿಗೆ ನಿಜವಾದ ತಾಯಿಯಂತಿದ್ದವರು ನಮ್ಮ ಪ್ರೀತಿಯ ಪವರ್​ ಸ್ಟಾರ್​ ಅಪ್ಪು. ಅಂತಹಾ ಅಪ್ಪುವನ್ನು ಕಳೆದುಕೊಂಡ ನಾವು ನಿಜಕ್ಕೂ ಬಡವಾಗಿದ್ದೇವೆ. ಹೃದಯಾಘಾತದಿಂದ ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ.

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಕೂಡ ಅವರು ಸ್ನೇಹಿತರನ್ನು ಸಂಪಾದಿಸಿದ್ದರು. ಗಡಿ ಗಡಿಗಳಾಚೆಗೂ ಅವರ ಆಂತರ್ಯದ ನಗು ಹರಡಿಕೊಂಡಿತ್ತು ಅನ್ನೋದಕ್ಕೆ ಅವರ ಅಗಲಿಕೆಯ ದಿನ ನೆರೆದ ಜನಸ್ತೋಮವೇ ಸಾಕ್ಷಿ..! ಅಂತಹಾ ಅಪ್ಪು ಎಂಬ ಗೆಳೆಯನ ಅಗಲಿಕೆಯ ನೋವಿನಲ್ಲೇ ಈವತ್ತು ಟಾಲಿವುಡ್​​ ಸ್ಟಾರ್​​ ಅಲ್ಲು ಅರ್ಜುನ್​​ ಪುನೀತ್ ನಿವಾಸಕ್ಕೆ ತೆರಳಿದ್ದಾರೆ.

​ಈ ಹಿಂದೆ ನಟ ಅಲ್ಲುಅರ್ಜುನ್​​ ‘ಪುಷ್ಪ’ ಚಿತ್ರದ ಪ್ರಚಾರದ ಸಮಯದಲ್ಲಿ ಬೆಂಗಳೂರಿಗೆ ಬಂದಿದ್ದರು. ಆದರೆ ಆ ವೇಳೆ ಅವರು ಪುನೀತ್​ ನಿವಾಸಕ್ಕೆ ಭೇಟಿ ನೀಡಿರಲಿಲ್ಲ. ಅಭಿಮಾನಿಗಳೇ ಅಲ್ಲುರನ್ನ ತಗಾದೆ ತೆಗೆದುಕೊಂಡಿದ್ದೂ ಆಯ್ತು. ಅದಕ್ಕೆ ಅಲ್ಲು ಅರ್ಜುನ್​​ ತೂಕದ ಉತ್ತರ ಕೊಟ್ಟಿದ್ದರು. ಪ್ರಮೋಶನ್​​ ಹೊತ್ತಿನಲ್ಲಿ ಬಂದಿರುವ ನಾನು ಅಪ್ಪುಯ ನಿವಾಸಕ್ಕೆ ಭೇಟಿ ನೀಡೋದಿಲ್ಲ. ಅದಕ್ಕೆಂದೇ ಒಂದು ದಿನ ನಾನು ಬೆಂಗಳೂರಿಗೆ ಬರುತ್ತೇನೆ ಎಂದಿದ್ದರು.

ಪುನೀತ್​ ರಾಜ್​ಕುಮಾರ್​ ಕುಟುಂಬಕ್ಕೆ ನನ್ನ ಸಂತಾಪವಿದೆ. ‘ಪುಷ್ಪ’ ಸಿನಿಮಾ ಕೆಲಸಗಳಿಂದ ಬೆಂಗಳೂರಿಗೆ ಬರೋದಕ್ಕೆ ಆಗಿರಲಿಲ್ಲ. ಈಗ ‘ಪುಷ್ಪ’ ಸಿನಿಮಾ ಪ್ರಮೋಷನ್​ಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ. ‘ಪುಷ್ಪ’ ರಿಲೀಸ್​ ಆದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಬಂದು ಇಡೀ ಕುಟುಂಬವನ್ನು ಭೇಟಿ ಮಾಡುತ್ತೇನೆ. ಅದು ನನ್ನ ಕರ್ತವ್ಯ ಎಂದಿದ್ದರು ಅಲ್ಲು ಅರ್ಜುನ್.

ಅಪ್ಪು ನಿಧನರಾದ ಬಳಿಕ ಅಕ್ಕಪಕ್ಕದ ರಾಜ್ಯಗಳ ಅನೇಕ ಸೆಲೆಬ್ರಿಟಿಗಳು ಬಂದು ಡಾ. ರಾಜ್​ಕುಮಾರ್​ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಹಾಗೆಯೇ ಇಂದು ಟಾಲಿವುಡ್​ನ ಖ್ಯಾತ ನಟ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ಅವರು ಪುನೀತ್​ ರಾಜ್​ಕುಮಾರ್​ ನಿವಾಸಕ್ಕೆ ಭೇಟಿ ನೀಡಿದರು. ಅಪ್ಪು ನಿಧನದಿಂದ ಕಂಬನಿ ಹಾಕುತ್ತಿರುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ ಅಲ್ಲು ಅರ್ಜುನ್​.

Also read:  ಸ್ಯಾಂಡಲ್​​ವುಡ್​​ಗೆ 'ರಾಜಾಹುಲಿ' ಪಾದಾರ್ಪಣೆ: ನೈಜ ಘಟನೆಯಾಧಾರಿತ ಸಿನಿಮಾದಲ್ಲಿ ಬಿಎಸ್​ವೈ ನಟನೆ

ಪುನೀತ್​ ಮನೆಗೆ ಭೇಟಿ ನೀಡುವುದಾಗಿ ಈ ಮೊದಲೇ ಹೇಳಿದ್ದ ಅಲ್ಲು ಅರ್ಜುನ್​​ ಅದರಂತೆಯೇ ನಡೆದುಕೊಂಡಿದ್ದಾರೆ. ಪುನೀತ್​ ನಿಧನರಾದ ಸಂದರ್ಭದಲ್ಲಿ ಹೈದರಾಬಾದ್​ನಲ್ಲಿ ನಡೆದ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿದ್ದ ಅಲ್ಲು ಅರ್ಜುನ್​​ ಮೌನಾಚರಣೆ ಮಾಡುವ ಮೂಲಕ ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದರು.

ಇಂದು ಬೆಳಗ್ಗೆ 11 ಗಂಟೆಗೆ ಖಾಸಗಿ ವಿಮಾನದಲ್ಲಿ ಹೈದರಾಬಾದ್​ನಿಂದ ಹೊರಟ ಅಲ್ಲು ಅರ್ಜುನ್​​, ಮಧ್ಯಾಹ್ನ 12 ಗಂಟೆ ಸುಮಾರಿಗೆ ಎಚ್​ಎಎಲ್​ಗೆ ಬಂದಿಳಿದರು. ಅವರು ಬಂದಿದ್ದು ಯಾವುದೋ ಸಿನಿಮಾ ಪ್ರಚಾರಕ್ಕಾಗಿ ಅಲ್ಲ. ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದ ಅಲ್ಲು ಅರ್ಜುನ್​ ನಂತರ ನೇರವಾಗಿ ತೆರಳಿದ್ದು ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ನಿವಾಸಕ್ಕೆ ಶಿವಣ್ಣ ಜೊತೆ ಮಾತುಕತೆ ನಡೆಸಿದ ಬಳಿಕ. ಸದಾಶಿವನಗರದಲ್ಲಿರುವ ಪುನೀತ್ ರಾಜ್‌ಕುಮಾರ್‌ ನಿವಾಸಕ್ಕೆ ಭೇಟಿ ನೀಡಿದ ಅಲ್ಲು ಅರ್ಜುನ್ ಪುನೀತ್ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಅಪ್ಪು ಸಮಾಧಿ ಬಳಿ ತೆರಳಿ ಪುಪ್ಪ ನಮನ ಸಲ್ಲಿಸಿದ್ದಾರೆ.

Also read:  ಸೋಶಿಯಲ್​ ಮೀಡಿಯಾದಲ್ಲಿ ರಾಬರ್ಟ್​ ಟೀಸರ್ ಹವಾ

 

Latest article