Tuesday, August 16, 2022

ಸ್ಯಾಂಡಲ್​ವುಡ್​​ನಲ್ಲಿ ನಟಿಸಲಿದ್ದಾರೆ ಪ್ರೇಮಂ ಖ್ಯಾತಿಯ ಸಾಯಿ ಪಲ್ಲವಿ..!

Must read

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ಆ್ಯಕ್ಟ್ 1978 ಚಿತ್ರದ ನಂತರ ಮತ್ತೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ..ಈ ಸಿನಿಮಾದ ವಿಶೇಷತೆ ಏನಂದ್ರೆ ಸೌತ್​ ಇಂಡಿಯನ್​ ಸ್ಟಾರ್ ನಟಿ ಸಾಯಿ ಪಲ್ಲವಿ ಈ ಚಿತ್ರದ ಲೀಡ್​​ರೋಲ್​ನಲ್ಲಿ ಆ್ಯಕ್ಟ್ ಮಾಡೋದು ಆಲ್​ಮೋಸ್ಟ್ ಕನ್ಫರ್ಮ್​ ಆಗಿದೆ..ಆ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮನ್ಸೋರೆ ಹೆಸರು ಚಿರಪರಿಚಿತ..ಹರಿವು, ನಾತಿಚರಾಮಿ, ಆ್ಯಕ್ಟ್ 1978 ಈ ಮೂರು ಸಿನಿಮಾಗಳ ಸೂತ್ರದಾರ ಮನ್ಸೋರೆ ರಾಷ್ಟ್ರಪ್ರಶಸ್ತಿ ವಿಜೇತ ಕೂಡ ಹೌದು.. ರೀಸೆಂಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಮನ್ಸೋರೆ ಇದೀಗ ಮತ್ತೆ ಕೆಲಸದ ಕಡೆ ಮುಖ ಮಾಡಿದ್ದಾರೆ.ಮತ್ತೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ..

ಅಂದ್ಹಾಗೆ ಈ ಸಿನಿಮಾ ಈ ಹಿಂದಿನ ಮೂರು ಸಿನಿಮಾಗಳಿಗಿಂತಲೂ ಬಹಳ ವಿಭೀನ್ನವಾಗಿದ್ದು,ಈ ಬಾರಿ ಮನ್ಸೋರೆ ಕೈ ಹಾಕಿರೋದು ಪೊಲಿಟಿಕಲ್​ ಥ್ರಿಲ್ಲರ್ ಕಥೆಗೆ..ಯೆಸ್ ಆ್ಯಕ್ಟ್ 1978 ಚಿತ್ರವನ್ನ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ನೋಡಿ ಮೆಚ್ಚಿಕೊಂಡು, ತೆಲುಗಿನ ನಿರ್ಮಾಪಕರೊಬ್ಬರು ಮನ್ಸೋರೆಯವರನ್ನ ಕಾಂಟ್ಯಾಕ್ಟ್ ಮಾಡಿ ಸಿನಿಮಾ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ..ಆ ನಿಟ್ಟಿನಲ್ಲಿ ಮನ್ಸೋರೆ ಪೊಲಿಟಿಕಲ್​ ಥ್ರಿಲ್ಲರ್​ ಸಬ್ಜೆಕ್ಟ್​ವೊಂದನ್ನ ರೆಡಿಮಾಡಿದ್ದು, ಈ ಚಿತ್ರದ ಲೀಡ್​ರೋಲ್ನಲ್ಲಿ ನಟಿ ಸಾಯಿಪಲ್ಲವಿ ನಟಿಸೊದು ಬಹುತೇಕ ಖಚಿತ ಆಗಿದೆ..ಈಗಾಗ್ಲೇ ಫೋನ್​ನಲ್ಲಿ ಒನ್​ ಲೈನ್​ ಸ್ಟೋರಿ ಕೇಳಿರೋ ಸಾಯಿಪಲ್ಲವಿ, ಲೈನ್​ ಇಷ್ಟ ಆಗಿದೆ..ಫೈನಲ್ ಸ್ಕ್ರಿಪ್ಟ್​ ಕಳುಹಿಸಿಕೊಡಿ ಅಂತ ಕೇಳಿದ್ದಾರಂತೆ.

ಅಂದ್ಹಾಗೆ ಈ ಸಿನಿಮಾ ,ಇಡೀ ಭಾರತೀಯ ರಾಜಕೀಯ ರಂಗದ ಮಹಿಳಾ ರಾಜಕಾರಣಿಗಳ ಕಥೆ-ವ್ಯಥೆ,ಅವರು ರಾಜಕೀಯರಂಗದಲ್ಲಿ ಪಟ್ಟ ಕಷ್ಟ ಹೋರಾಟದ ಸುತ್ತ ಹೆಣೆದಿರುವ ಕಥೆಯಾಗಿದೆ..ಕಥೆಗೆ ಅನುಗುಣವಾಗಿ ನಟಿ ಸಾಯಿ ಪಲ್ಲವಿ ಮಹಿಳಾ ರಾಜಕಾರಣಿಯಾಗಿ ಪಾತ್ರಮಾಡಲಿದ್ದಾರೆ..ಹಾಗೂ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮತ್ತು ಮಲೆಯಾಳಂನಲ್ಲಿ ರೆಡಿಯಾಗಲಿದೆ.

ಸದ್ಯದಲ್ಲೇ ನಿರ್ದೇಶಕ ಮನ್ಸೋರೆ ಫೈನಲ್​ ಸ್ಕ್ರಿಪ್ಟ್​ನೊಂದಿಗೆ ನಟಿ ಸಾಯಿಪಲ್ಲವಿಯನ್ನು ಭೇಟಿ ಮಾಡಲಿದ್ದಾರೆ..ಹಾಗೂ ಸದ್ಯದಲ್ಲೇ ಚಿತ್ರಕ್ಕೆ ಬಂಡವಾಳ ಹಾಕ್ತಿರೋ ತೆಲುಗು ನಿರ್ಮಾಪಕರ ಹೆಸರನ್ನು ರಿವೀಲ್​ ಮಾಡಲಿದ್ದಾರೆ..ಎಲ್ಲಾ ಅಂದುಕೊಂಡಂತೆ ಆದ್ರೆ ಸೌತ್​ ಇಂಡಿಯನ್​ ಸ್ಟಾರ್ ನಟಿ ಸಾಯಿಪಲ್ಲವಿ ಸ್ಯಾಂಡಲ್​ವುಡ್ ಪರದೆಯ ಮೇಲೆ ಮಿಂಚಲಿದ್ದಾರೆ..

Also read:  ಕೆಲವು ನೋವುಗಳಿಗೆ ಅಕ್ಷರ ರೂಪ ಕೊಡಲು ಸಾಧ್ಯವಿಲ್ಲ- ರಮ್ಯಾ

ಅರ್ಚನಾಶರ್ಮಾ,ಎಂಟರ್​ಟೈನ್ಮೆಂಟ್​ ಬ್ಯೂರೋ,ಟಿವಿ5

Latest article