ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ 2 ಶೂಟಿಂಗ್ಗೆ ಬ್ರೇಕ್ ಕೊಟ್ಟು ಇದೀಗ, ಸಖತ್ ಸಿನಿಮಾ ಸೆಟ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರದ ಒಂದು ಪೋಟೋ ವೈರಲ್ ಆಗಿದ್ದು, ಸಿನಿಮಾದಲ್ಲಿ ಗಣಿಯ ಪಾತ್ರ ರಿವೀಲ್ ಆಗಿದೆ. 15 ವರ್ಷಗಳ ಸಿನಿಮಾ ಜರ್ನಿಯಲ್ಲಿ ಇದೇ ಮೊದಲ ಬಾರಿಗೆ ಇಂತದ್ದೊಂದು ಪಾತ್ರದಲ್ಲಿ ಕಾಣಿಸುತ್ತಿದ್ದಾರೆ ಗೋಲ್ಡನ್ ಸ್ಟಾರ್.
ರೀಸೆಂಟಾಗಿ ಗೋಲ್ಡನ್ ಸ್ಟಾರ್ ಗಣಿ ಕಜಕಿಸ್ಥಾನದಲ್ಲಿ ಗಾಳಿಪಟ 2 ಶೂಟಿಂಗ್ ಮಾಡುತ್ತಿದರು. ಇದೀಗ ಶೆಡ್ಯೂಲ್ ಬ್ರೇಕ್ ಆಗುತ್ತಿದ್ದ ಹಾಗೇ, ಕೊಂಚವು ಬಿಡುವಿಲ್ಲದೇ ಸಖತ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಚಮಕ್ ಸಿನಿಮಾ ನಂತರ ನಿರ್ದೇಶಕ ಸಿಂಪಲ್ ಸುನಿ ಮತ್ತು ಗಣಿ ಕಾಂಬಿನೇಷನ್ ಆಗಿರೋದರಿಂದ ಸಖತ್ ಬಗ್ಗೆ ಸಹಜವಾಗೇ ಕುತೂಹಲ ಇದೆ.
ಸಖತ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ರಿಯಾಲಿಟಿ ಶೋ ಸಿಂಗರ್ ಪಾತ್ರದಲ್ಲಿ ಮಿಂಚ್ತಿದ್ದಾರೆ ಅನ್ನೋ ಮಾಹಿತಿ ಇತ್ತು. ಆದರೆ, ಇದೀಗ ಗಣಿ ಕ್ಯಾರೆಕ್ಟರ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ಗಣೇಶ್ ಕಣ್ಣು ಕಾಣದ, ವಿಶೇಷ ಚೇತನರಾಗಿ ಕಾಣಿಸಿಕೊಳ್ತಿದ್ದಾರೆ. ಈ ವಿಚಾರವನ್ನ ಸ್ವತಃ ಗಣಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಣ್ಣಿಗೆ ಗ್ಲಾಸ್ ಹಾಕಿ, ಕೈಯ್ಯಲ್ಲಿ ಕೋಲು, ಕೋರ್ಟಿನ ಕಟಕಟ್ಟೆಯಲ್ಲಿ ನಿಂತಿರುವಂತಿರುವ ಫೋಟೋವೊಂದನ್ನ ಗಣಿ ಶೇರ್ ಮಾಡಿದ್ದು, 15 ವರ್ಷಗಳ ಸಿನಿಜರ್ನಿಯಲ್ಲೇ ಇಂತದ್ದೊಂದು ಪಾತ್ರ ಮಾಡುತ್ತಿದ್ದೀನಿ ಹಾಗೂ ನಾಯಕನಾಗಿ 15 ವರ್ಷ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನ್ನ ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಪ್ರೀತಿಗೆ ಬಿಚ್ಚಿಟ್ಟ ಪ್ರೀತಿಯ ಬೆಳಕು ಚೆಲ್ಲಿ, ಹರಸಿ ಅಂತ ಅರ್ಥಪೂರ್ಣ ಸಾಲುಗಳನ್ನ ಬರೆದಿದ್ದಾರೆ.
ಈ ಹಿಂದೆ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಸಿನಿಮಾದ ಪಾತ್ರದ ಬಗ್ಗೆ, ಹೀಗೊಂದು ಸಾಲು ಬರೆದಿದರು. ಪ್ರತಿ ಚಿತ್ರವೂ ನನಗೆ ಹೊಸತನ, ಮೊದಲ ಬಾರಿಗೆ ಮಾಡುತ್ತಿರುವೆ ಈ ರೀತಿ ಪಾತ್ರನಾ ಅಂತ ಒಂದು ಕ್ಲೂ ಕೊಟ್ಟಿದರು. ಆದರೆ, ಇದೀಗ ಪಾತ್ರ ಏನು ಅನ್ನೋದು ರಿವೀಲ್ ಆಗಿದೆ.
ಇನ್ನು ಸಖತ್ ಸಿನಿಮಾದಲ್ಲಿ ಗಣಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಜೋಡಿಯಾಗಿದ್ದು, ಲಾಕ್ಡೌನ್ ನಂತರ ಮತ್ತೆ ಸಖತ್ ಸಿನಿಮಾದ ಭರ್ಜರಿ ಶೂಟಿಂಗ್ ನಡೀತಿದೆ.