ವಿದ್ಯಾಬಾಲನ್ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ದಿ ಮೋಸ್ಟ್ ಚಾರ್ಮಿಂಗ್ ಅಂಡ್ ಅಟ್ರ್ಯಾಕ್ಟೀವ್ ಹೀರೋಯಿನ್. ಡರ್ಟಿ ಪಿಕ್ಟರ್ ಚಿತ್ರದ ಮೂಲಕ ಮುಖ್ಯ ಭೂಮಿಕೆಗೆ ಬಂದ ವಿದ್ಯಾಬಾಲನ್, ಸಾಮಾಜಿಕ ಕಳಕಳಿ ಇರುವ ಚಿತ್ರ ಹಾಗೂ ಜಾಹಿರಾತುಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ರು. ಒಂದು ರಾಷ್ಟ್ರ ಪ್ರಶಸ್ತಿ, ನಾಲ್ಕು ಫಿಲ್ಮಂಫೇರ್ ಪ್ರಶಸ್ತಿ ಗಳಿಸಿರುವ ವಿದ್ಯಾಬಾಲನ್ ಅವರಿಗೆ, ಅವರ ಜೀವನದಲ್ಲೇ ಅತ್ಯಂತ ಸಾರ್ಥಕತೆಯ ಗೌರವೊಂದು ಸಂದಿದೆ. ಭಾರತೀಯ ಚಿತ್ರರಂಗದಲ್ಲಿ ವಿದ್ಯಾಬಾಲನ್ ಅವರ ಸೇವೆಯನ್ನ ಗುರುತಿಸಿ ಭಾರತೀಯ ಸೇನೆ ಬಹಳ ವಿಶೇಷವಾದ ಗೌರವವೊಂದನ್ನ ಸಮರ್ಪಿಸುತ್ತಿದೆ.. ಅದೇನಪ್ಪಾ ಅಂದ್ರೆ, ಕಾಶ್ಮೀರದ ಗುಲ್ಮಾರ್ಗ್ನಲ್ಲಿರುವ ಮಿಲಟರಿ ಫೈರಿಂಗ್ ರೇಂಜ್ಗೆ ನಟಿ ವಿದ್ಯಾಬಾಲನ್ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.
ಯಾವುದೇ ನಟ, ನಟಿ ಅಥವಾ ಸಾಧಕನಿಗೆ ಇದು ಹೆಮ್ಮೆಯ ವಿಚಾರ. ಈ ಗೌರವಕ್ಕೆ ಪಾತ್ರರಾಗಿರುವ ವಿದ್ಯಾಬಾಲನ್ಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ. ಇನ್ನು ತಮ್ಮ ನೆಚ್ಚಿನ ನಟಿಗೆ ಇಂತಹ ವಿಶೇಷ ಗೌರವ ಸಂದಿರುವುದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಈ ವರ್ಷದ ಇಂಡಿಯನ್ ಆರ್ಮಿ ವತಿಯಿಂದ ನಡೆದ ಗುಲ್ಮಾರ್ಗ್ ವಿಂಟರ್ ಫೆಸ್ಟಿವಲ್ನಲ್ಲಿ ನಟಿ ವಿದ್ಯಾಬಾಲನ್ ತಮ್ಮ ಕುಟುಂಬ ಸಮೇತ ಭಾಗಿಯಾಗಿದ್ದರು. ಅಲ್ಲದೇ ಇತ್ತೀಚೇಗಷ್ಟೆ ಆಸ್ಕರ್ ಆಡಳಿತ ಮಂಡಳಿಯ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ಲ್ಲಿ ಕಾರ್ಯನಿರ್ವಾಹಕ ಸದಸ್ಯರ ಹೊಸ ಬ್ಯಾಚ್ಗೂ ವಿದ್ಯಾಬಾಲನ್ ಆಯ್ಕೆಯಾಗಿದ್ದರು. ಒಟ್ಟಾರೆ ನಟಿಯೊಬ್ಬರ ಸಾಧನೆ ಗುರುತಿಸಿ ಇಂಡಿಯನ್ ಆರ್ಮಿ ಇಷ್ಟೊಂದು ದೊಡ್ಡಮಟ್ಟದ ಗೌರವ ಸಲ್ಲಿಸಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರವಾಗಿದೆ.
ವರದಿ-ಮಲ್ಲಿಕಾ ಪೂಜಾರಿ