Monday, November 29, 2021

ನೃತ್ಯ ಕಲಾವಿದರ ಕಷ್ಟಕ್ಕೆ ನಿಖಿಲ್​ ಕುಮಾರಸ್ವಾಮಿ ಸಹಾಯ ಹಸ್ತ

Must read

ಕೊರೊನಾ ಕಾರಣದಿಂದ ಶೂಟಿಂಗ್​ ಕಂಪ್ಲೀಟ್​ ಮಾಡಿದ ಚಿತ್ರಗಳು ರಿಲೀಸ್​ ಆಗಲಿಲ್ಲ. ಮುಹೂರ್ತ ನೆರವೇರಿಸಿದ ಚಿತ್ರಗಳು ಸೆಟ್ಟೇರಲಿಲ್ಲ. ಹೀಗೆ ಚಿತ್ರರಂಗದ ಎಲ್ಲಾ ಕಾರ್ಯಗಳು ಸಂಪೂರ್ಣ ಎರಡು ತಿಂಗಳು ಸ್ತಬ್ಧವಾಗಿದ್ದವು. ಈ ಸಮಯದಲ್ಲಿ ಬಣ್ಣದ ಜಗತ್ತನ್ನೇ ನಂಬಿದ್ದ ಸಾಕಷ್ಟು ಸಿನಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಇಂಡಸ್ಟ್ರಿಯ ನಟ ನಟಿಯರು ಸಿನಿ ಕಾರ್ಮಿಕರ ನೆರವಿಗೆ ನಿಂತರು. ನಗದು, ದಿನಸಿ ಕಿಟ್ ವಿತರಣೆ​ ಹೀಗೆ ತಮ್ಮ ಕೈಲಾದ ಸಹಾಯ ಮಾಡಿದರು.

ಮೊದಲಿನಿಂದಲೂ ಜನ ಸೇವೆಯಲ್ಲಿ ತೊಡಗಿಕೊಂಡಿದ್ದ ನಟ ನಿಖಿಲ್ ಕುಮಾರಸ್ವಾಮಿ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗದ ಕಾರ್ಮಿಕರ ಸಂಕಷ್ಟಕ್ಕೆ ಸಹಾಯ ಹಸ್ತಚಾಚಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಕರ್ನಾಟಕ ನೃತ್ಯ ಕಲಾವಿದರ ಸಂಘದ ಸದಸ್ಯರಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಜೊತೆ ಡ್ಯಾನ್ಸ್ ಮಾಸ್ಟರ್ ಭೂಷಣ್ ಕೈಜೋಡಿಸಿದ್ದಾರೆ. ಈ ವಿಚಾರವನ್ನ ನಿಖಿಲ್​ ತಮ್ಮ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ನಿನ್ನೆ ಕೂಡ ರಾಮನಗರದ ಜನಪದ ಕಲಾವಿದರಿಗೆ ಆಹಾರ್ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಕೈ ಜೋಡಿಸಿದ್ದಾರೆ.

ಇನ್ನು ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲೂ ನಿಖಿಲ್​ ಕಷ್ಟದಲ್ಲಿರುವ ಅನೇಕರಿಗೆ ನೆರವಾಗಿದ್ದರು. ಅದೇ ರೀತಿ ಈ ಬಾರಿ ಕೊರೊನಾ ಎರಡನೇ ಅಲೆ ಆರ್ಭಟ ನಡುವೇ ಕೊರೊನಾ ವಾರಿಯರ್ಸ್​ಗಳಾಗಿ ಹಗಲಿರುಳು ಶ್ರಮಿಸುತ್ತಿದ್ದ ರಾಮನಗರದ ಆಶಾ ಕಾರ್ಯಕರ್ತೆಯರು ಮತ್ತು ಸ್ಟಾಫ್ ನರ್ಸ್​ಗಳಿಗೆ ಆರ್ಥಿಕ ನೆರವು ನೀಡಿದ್ದರು.

ನಿಖಿಲ್​ ಜನಸೇವೆ, ರಾಜಕೀಯದ ಜೊತೆ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಬ್ಯೂಸಿಯಾಗಿದ್ದಾರೆ. ಸ್ಯಾಂಡಲ್​ವುಡ್​ನ ಮೂರು ಹಿಟ್​ ಸಿನಿಮಾದಲ್ಲಿ ನಟಿಸಿರುವ ಅವರು, ತಮ್ಮ ನಾಲ್ಕನೇ ಚಿತ್ರ ರೈಡರ್​​ನ ಪ್ರಿ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನೂ ಸ್ಪೆಷಲ್​ ಎಂಬಂತೆ ನಿಖಿಲ್​ ತಂದೆ ಆಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಸ್ವತಃ ಅವರನ್ನೇ ಹೇಳಿದಾಗ ಯೆಸ್​ ಅಂದಿದ್ರು. ಒಟ್ಟಾರೆ ರೈಡರ್​ ಜೊತೆಗೆ ನಿಖಿಲ್​ ಅಭಿಮಾನಿಗಳಿಗೆ ಎರಡೆರಡು ಗುಡ್​ನ್ಯೂಸ್​ ಸಿಕ್ಕಂತಾಗಿದೆ. ಅದೇನೇ ಇರಲಿ ಒಬ್ಬ ನಟನಾಗಿ ನಿಖಿಲ್​ ಜನಪರ ಕಾಳಜಿ ಎಲ್ಲರೂ ಮೆಚ್ಚುವಂತದ್ದು.

Also read:  ದೇಶದಲ್ಲಿ ಒಂದೇ ದಿನ 43,393 ಮಂದಿಗೆ ಕೊರೊನಾ ಸೋಂಕು

ವರದಿ-ಮಲ್ಲಿಕಾ ಪೂಜಾರಿ

Latest article