Tuesday, May 17, 2022

ದೀಪಾವಳಿ ಹಬ್ಬಕ್ಕೆ ತ್ರಿವಿಕ್ರಮ ಲಿರಿಕಲ್​ ಸಾಂಗ್​ ರಿಲೀಸ್​

Must read

ಫಸ್ಟ್ ಲುಕ್​​, ಟೀಸರ್​ನಿಂದ್ಲೇ ಸಿನಿಪ್ರಿಯರ ಗಮನ ಸೆಳೆದ ಕ್ರೇಜಿ ಪುತ್ರ ತ್ರಿವಿಕ್ರಮ ಇದೀಗ , ಮಮ್ಮಿ ಪ್ಲೀಸ್ ಮಮ್ಮಿ ಅಂತ ಅಮ್ಮನ ಹಿಂದೆ ಹಿಂದೆ ಓಡಾಡ್ತಾ ಇದ್ದಾನೆ. ದೀಪಾವಳಿ ಹಬ್ಬಕ್ಕೆ ತ್ರಿವಿಕ್ರಮ ಟೀಂನಿಂದ ಸೂಪರ್​ ಸಾಂಗೊಂದು ಗಿಫ್ಟ್ ಆಗಿ ಸಿಕ್ಕಿದೆ.

​ಕ್ರೇಜಿಸ್ಟಾರ್ ರವಿಚಂದ್ರನ್​ ಪುತ್ರ ವಿಕ್ರಂ ರವಿಚಂದ್ರನ್​, ತ್ರಿವಿಕ್ರಮನಾಗಿ ಚಂದನವನಕ್ಕೆ ಕಾಲಿಡ್ತಿರೋದು ಗೊತ್ತೇಯಿದೆ. ಈಗಾಗಲೇ ಫಸ್ಟ್ ಲುಕ್, ಟೀಸರ್​ ಮೂಲಕ ಗಮನ ಸೆಳೆದಿರೋ ತ್ರಿವಿಕ್ರಮ, ಸದ್ಯ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾನೆ. ತ್ರಿವಿಕ್ರಮ ಚಿತ್ರದ ಲಿರಿಕಲ್​ ಸಾಂಗೊಂದು ರಿಲೀಸ್ ಆಗಿದೆ.

ಇದೊಂದು ಫನ್​ ಎಂಟರ್​ಟೈನರ್​ ಸಾಂಗ್​ ಆಗಿದ್ದು, ಮಮ್ಮಿ ಪ್ಲೀಸ್ ಮಮ್ಮಿ ಅಂತ ನಾಯಕ ತ್ರಿವಿಕ್ರಮ, ತಾಯಿಯ ಹಿಂದೆ ಓಡಾಡ್ತಾ, ಹಾಡ್ತಾ, ಕುಣಿತಾ ಅವರನ್ನ ಲವ್​ ಮ್ಯಾರೇಜ್​ಗೆ ಒಪ್ಪಿಸೋ ಹಾಡಾಗಿದೆ.

ಅಂದ್ಹಾಗೇ ತ್ರಿವಿಕ್ರಮನಿಗೆ ಅರ್ಜುನ್​ ಜನ್ಯಾ ಮ್ಯೂಸಿಕ್​ ಮಾಡಿದ್ದು, ಈ ಹಾಡಿಗೆ ವಿ.ನಾಗೇಂದ್ರ ಪ್ರಸಾದ್​​ ಸಾಹಿತ್ಯ ಬರೆದಿದ್ದಾರೆ ಹಾಗೂ ವಿಜಯ್​ ಪ್ರಕಾಶ್​ ದನಿಯಾಗಿದ್ದಾರೆ. ರಾಜು ಸುಂದರಂ ಮಾಸ್ಟರ್ ಕೊರಿಯೊಗ್ರಫಿ ಮಾಡಿದ್ದಾರೆ.

ಇನ್ನು ತ್ರಿವಿಕ್ರಮ ಸಿನಿಮಾ ಸಂಪೂರ್ಣವಾಗಿ ರೆಡಿಯಾಗಿದ್ದು, ಸಹನಾ ಮೂರ್ತಿ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಕೊರೊನಾ ಸಮಸ್ಯೆ ಇಲ್ಲವಾಗಿದ್ರೆ ಇಷ್ಟು ಹೊತ್ತಿಗೆ ಥಿಯೇಟರ್ ಅಂಗಳದಲ್ಲಿ ತ್ರಿವಿಕ್ರಮ ಅಬ್ಬರ ಶುರುವಾಗ್ತಿತ್ತು. ಸದ್ಯದಲ್ಲೇ ಚಿತ್ರತಂಡ ರಿಲೀಸ್ ಡೇಟ್​ ಅನೌನ್ಸ್​ ಮಾಡಲಿದೆ.

Latest article