Tuesday, August 16, 2022

ಗೋಲ್ಡನ್ ಸ್ಟಾರ್ ಬರ್ತ್ಡೇ ಸೆಲೆಬ್ರೇಷನ್​ಗೆ ಬ್ರೇಕ್

Must read

ಕೊರೊನಾ ಲಾಕ್​ಡೌನ್​ನಿಂದ ಕಳೆದ ವರ್ಷ ಹಾಗೂ ಈ ವರ್ಷ ಎಲ್ಲಾ ಸ್ಟಾರ್ಸ್​ ಹುಟ್ಟುಹಬ್ಬಗಳಿಗೂ ಬ್ರೇಕ್​ ಬೀಳ್ತಾನೇ ಬಂದಿದೆ. ಅದೇ ರೀತಿ ಈ ಬಾರಿ ಗೋಲ್ಡನ್​ ಸ್ಟಾರ್ ಬರ್ತ್​ಡೇ ಸೆಲೆಬ್ರೇಷನ್​ಗೂ ಬ್ರೇಕ್​ ಬಿದ್ದಿದ್ದು, ನೋವಿನ ಸಮಯದಲ್ಲಿ ಸಂಭ್ರಮ ಬೇಡ ಅಂತ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ ಗಣಿ.

ಕೊರೊನಾ ಮತ್ತು ಲಾಕ್​​ಡೌನ್​ನಿಂದ ಜನರ ಪರಿಸ್ಥಿತಿ ಅಸ್ತವ್ಯಸ್ಥವಾಗಿದೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಎಷ್ಟೋ ಸಾವು ನೋವುಗಳು ಸಂಭವಿಸಿದೆ. ಈಗಷ್ಟೇ ಲಾಕ್​ಡೌನ್​ನಿಂದ ರಿಲೀಫ್​ ಸಿಕ್ಕಿದ್ದು, ಜನ ಕೊಂಚ ಸಹಜ ಸ್ಥಿತಿಗೆ ಬರ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸೆಲೆಬ್ರೇಷನ್​ ಬೇಡ ಅಂತಿದ್ದಾರೆ ಗೋಲ್ಡನ್​ ಸ್ಟಾರ್ ಗಣೇಶ್.

ಜುಲೈ 2 ಗೋಲ್ಡನ್​ ಸ್ಟಾರ್ ಗಣೇಶ್​ ಹುಟ್ಟುಹಬ್ಬ. ಪ್ರತಿವರ್ಷ ಅಭಿಮಾನಿಗಳು ಗಣಿ ಮನೆ ಮುಂದೆ ಜಮಾಯಿಸಿ, ಅದ್ದೂರಿಯಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡ್ತಾ ಇದ್ರು. ಆದರೆ, ಕಳೆದ ವರ್ಷ ಕೊರೊನಾದಿಂದ ಸಂಭ್ರಮಕ್ಕೆ ಬ್ರೇಕ್​ ಬಿದ್ದಿತ್ತು. ಅದೇ ರೀತಿ ಈ ವರ್ಷ ಕೂಡ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್​ ಬಿದ್ದಿದೆ. ಸ್ವತಃ ಗೋಲ್ಡನ್​ ಸ್ಟಾರ್ ಇಂತಹ ಪರಿಸ್ಥಿತಿಯಲ್ಲಿ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳದೇ ಇರಲು ನಿರ್ಧಾರ ಮಾಡಿದ್ದು, ಅಭಿಮಾನಿಗಳಿಗೆ ಮನ ಮಿಡಿಯುವ ಪತ್ರ ಬರೆದಿದ್ದಾರೆ.

ಎಲ್ಲರಿಗೂ ನಿಮ್ಮ ಗಣೇಶ್ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರವಿದ್ದೋ, ಅರಿವಿಲ್ಲದೆಯೋ ಈ ಕೋವಿಡ್ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ, ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾದದ್ದು ನೋವು ತರಿಸಿದೆ."ಅದೆಷ್ಟೋ ಜನರ ಜೀವಗಳು ನಲುಗಿ ಹೋಗಿವೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ ಎಂದೆನಿಸಿ ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಚಿಸಿರುತ್ತೇನೆ. ಅಲ್ಲದೇ ಜನ್ಮದಿನದಂದು ನಾನು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟುಹಬ್ಬ ಆಚರಣೆಗೆ ನೀವು ಪ್ರೀತಿಯಿಂದ ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೆ ಅದೇ ಖರ್ಚಿನಲ್ಲಿ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ" ಅದೇ ನನಗೆ ಶ್ರೀರಕ್ಷೆ ಎಂದು ಪತ್ರದ ಮುಖೇನ ತಿಳಿಸಿದ್ದಾರೆ.

Also read:  ಫ್ಯಾಂಟಸಿ ಲೋಕದಲ್ಲಿ ಪ್ರಳಯಾಂತಕ ಶ್ರೀಮನ್ನಾರಾಯಣ; ಟ್ರೈಲರ್ ಸೂಪರ್

ಅಂದ್ಹಾಗೇ ಗೋಲ್ಡನ್​ ಸ್ಟಾರ್ ಪತ್ರ ಅಭಿಮಾನಿಗಳಿಗೆ ನಿರಾಶೆ ತಂದಿದ್ರೂ, ನೆಚ್ಚಿನ ನಟನ ಮಾತನ್ನ ಪಾಲಿಸದೇ ಇರಲಾರರು. ಇನ್ನು ಗಣಿ ಲಿಸ್ಟ್​​ನಲ್ಲಿ ಸದ್ಯ ಸಖತ್ ,ತ್ರಿಬಲ್​ ರೈಡಿಂಗ್ ಹಾಗೂ ಗಾಳಿಪಟ 2 ಸಿನಿಮಾಗಳಿವೆ.

Latest article