ಗೋಲ್ಡನ್ ಸ್ಟಾರ್ ಗಣೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. 4 ರಿಂದ 5 ಸಿನಿಮಾಗಳು ಕೈಯ್ಯಲಿರೋ ಗಣಿ ಲಾಕ್ಡೌನ್ನಿಂದ ಮನೆಯಲ್ಲಿಯೇ ಕಾಲ ಕಳಿತ್ತಿದ್ದರು. ಇದೀಗ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಶೂಟಿಂಗ್ ಶುರು ಮಾಡುತ್ತಿದ್ದಾರೆ. ಇಷ್ಟು ದಿನ ನಾಯಕಿಯ ಹುಡುಕಾಟದಲ್ಲಿದ್ದ ಟೀಂ, ಗಣಿಗೆ ಜೋಡಿಯನ್ನ ಆಯ್ಕೆ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಗಾಳಿಪಟ 2, ದಿ ಸ್ಟೋರಿ ಆಫ್ ರಾಯಘಡ, ಸಖತ್ ಇದೆಲದರ ಜೊತೆಗೆ ಹೊಸ ಸಿನಿಮಾ ತ್ರಿಬಲ್ ರೈಡಿಂಗ್. ಸದ್ಯ ತ್ರಿಬಲ್ ರೈಡಿಂಗ್ ಶೂಟಿಂಗ್ ಶುರು ಮಾಡೋ ಪ್ಲಾನ್ನಲ್ಲಿರೋ ಗೋಲ್ಡನ್ ಸ್ಟಾರ್ಗೆ ನಾಯಕಿ ಸಿಕ್ಕಿದ್ದಾಳೆ.

ಕಿರುತೆರೆಯಲ್ಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ಜೊತೆ ಜೊತೆಯಲಿ ಖ್ಯಾತಿಯ ಅನು ಅಲಿಯಾಸ್ ಮೇಘಾ ಶೆಟ್ಟಿ ಸದ್ಯ , ಗಣಿ ಜೊತೆ ತ್ರಿಬಲ್ ರೈಡಿಂಗ್ ಹೋಗೋಕ್ಕೆ ರೆಡಿಯಾಗಿದ್ದಾರೆ. ಈ ಮೂಲಕ ಸ್ಮಾಲ್ ಸ್ಕ್ರೀನ್ನಿಂದ ಬಿಗ್ ಸ್ಕ್ರೀನ್ಗೆ ಎಂಟ್ರಿಯಾಗುತ್ತಿದ್ದಾರೆ ಮೇಘಾ ಶೆಟ್ಟಿ. ಕಿರುತೆರೆಯಲ್ಲಿ ತಮ್ಮದೇ ಆದ ಅಭೀಮಾನಿ ಬಳಗವನ್ನ ಹೊಂದಿರೋ ಮೇಘಾ ಶೆಟ್ಟಿ, ಸ್ಯಾಂಡಲ್ವುಡ್ಗೆ ಎಂಟ್ರಿಯಾಗುತ್ತಿರೋದು ಅವರ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.
ಇನ್ನು ಈ ಸಿನಿಮಾ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು, ಲವ್, ಕಾಮಿಡಿ, ಆಕ್ಷನ್ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಇರೋ ಫುಲ್ ಫ್ಯಾಕೇಜ್. ಈ ಹಿಂದೆ ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಮಹೇಶ್ ಗೌಡ ತ್ರಿಬಲ್ ರೈಡಿಂಗ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೇ ಚಿತ್ರಕ್ಕೆ ರಾಮ್ ಗೋಪಾಲ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಸಾಯಿ ಕಾರ್ತಿಕ್ ಸಂಗೀತ ಇರಲಿದೆ. ಈಗಾಗ್ಲೇ ಹೈದರಾಬಾದ್ನಲ್ಲಿ ಸಾಂಗ್ ರೆಕಾರ್ಡಿಂಗ್ ಕೆಲಸಗಳು ಆರಂಭವಾಗಿದ್ದು, ಅಕ್ಟೋಬರ್ನಿಂದ ಶೂಟಿಂಗ್ ಶುರುವಾಗಲಿದೆ.