ಬೆಂಗಳೂರು: ನನ್ನದು ಸಂದೇಶ್ರದ್ದು ಸಾವಿರ ಗಲಾಟೆಯಿದೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗುರುವಾರ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದ ತಮ್ಮ ಮೇಲಿರುವ ಆರೋಪದ ಬಗ್ಗೆ ಮಾತನಾಡಿದ ಅವರು, ಇಂದ್ರಜಿತ್ ಅವರು ದೊಡ್ಡ ತನಿಖಾದಾರರು. ಅವರು ಏನ್ ಆದ್ರೂ ಹೇಳಲಿ. ಊಹಾಪೋಹಗಳನ್ನು ಬಿಟ್ಟು ಬಿಡಿ ಇದನ್ನು ಮುಚ್ಚಿ ಹಾಕುತ್ತಿಲ್ಲ. ಎಫ್ಐಆರ್ ಆಗಿದೆ, ಪೋಲಿಸವರಿಗೆ ತನಿಖೆ ಮಾಡಲು ಟೈಮ್ ಕೊಡಿ ಎಂದಿದ್ದಾರೆ.
ಇನ್ನು ಈ ವಿಚಾರದಲ್ಲಿ ಜಾತಿ ಬೇರೆ ತರತ್ತಾ ಇದ್ದಾರೆ. ಇವತ್ತು ಯಾಕೆ ಹುಟ್ಟಿಕೊಂಡ್ರು. ಇಂದ್ರಜಿತ್ ಲಂಕೇಶ್ ಅವರು ಇಂಟರ್ಯ್ಯೂ ಗೆ ಕೇಳಿದರು. ಪೋಲಿಸ್ ತನಿಖೆ ನಡೆದ ಮೇಲೆ ಮಾತನಾಡುತ್ತೇನೆ. ಉಮಾಪತಿ, ಹರ್ಷಗೆ ಮಾಧ್ಯಮಗಳಿಗೆ ಹೇಳಿಕೆ ಕೊಡುವುದು ನಿಲ್ಲಿಸಿ ಎಂದಿದ್ದೇನೆ. ಪೋಲಿಸ್ ತನಿಖೆ ನಡೆದ ಮೇಲೆ ಮಾತನಾಡ್ತೇನೆ ಎಂದು ಹೇಳಿದರು.
ಸದ್ಯ ನಾಲ್ಕು ದಿನದ ಲೆಕ್ಕ ತೆಗೆದುಕೊಳ್ಳಲಿ. ಇಂದ್ರಜಿತ್ ಅವರು ಪ್ರೂವ್ ಮಾಡಿಕೊಳ್ಳಲಿ. ಈಗ ಮೈಸೂರಿಗೆ ಹೋಗ್ತಾ ಇದ್ದೇನೆ. ಆಷಾಢ ಶುಕ್ರವಾರ, ಚಾಮುಂಡಿ ಭೇಟಿ ನೀಡುತ್ತೇನೆ ಎಂದು ನುಡಿದರು.