Tuesday, August 16, 2022

ಅಂತೂ ರಿವೀಲ್ ಆಯ್ತು ಗಾಳಿಪಟ 2 ನಾಯಕಿಯರ ಲಿಸ್ಟ್

Must read

ಬೆಂಗಳೂರು: ಗಾಳಿಪಟ 2. ಸಿನಿಮಾ ಶುರುವಾಗುತ್ತೆ ಅಂದಾಗ್ಲೇ ಅದರ ಬಗ್ಗೆ ಕುತೂಹಲ ಶುರುವಾಗಿತ್ತು. ಆದರೆ, ಈ ಸಿನಿಮಾದಲ್ಲಿರುವ ನಾಯಕಿಯರ ಬಗ್ಗೆ ಮಾತ್ರ ಸರಿಯಾಗಿ ಕ್ಲಾರಿಟಿ ಇರಲಿಲ್ಲ. ಆದ್ರೀಗ ಚಿತ್ರದಲ್ಲಿ ಎಷ್ಟು ಜನ ಹಿರೋಯಿನ್ಸ್​ ಇದ್ದಾರೆ. ಯಾರೆಲ್ಲಾ ಇದ್ದಾರೆ ಅನ್ನೋದು ರಿವೀಲ್​ ಆಗಿದೆ.

ಸ್ಯಾಂಡಲ್​ವುಡ್​ನ ಕ್ರಿಯೇಟೀವ್ ಡೈರೆಕ್ಟರ್ ಯೋಗರಾಜ್ ಭಟ್. ಭಟ್ರ ನಿರ್ದೇಶನದ ಸಿನಿಮಾ ಅಂದ್ರೆ ಸಹಜವಾಗೇ ಕ್ಯೂರಿಯಾಸಿಟಿ ಇರುತ್ತೆ. ಇನ್ನು ಅವರ ಚಿತ್ರಗಳೂ ಹಾಗೇ ಒಂದಕ್ಕಿಂತ ಒಂದು ಡಿಫ್ರೆಂಟಾಗಿರುತ್ತೆ. ಇದೀಗ ಯೋಗರಾಜ್ ಭಟ್ಟರ ಗಾಳಿಪಟ 2 ಚಿತ್ರ ಟಾಕ್​ ಆಫ್ ದ ಟೌನ್ ಆಗಿದೆ.

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2, ಅನೌನ್ಸ್ ಆದಾಗಿನಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನು ಗಾಳಿಪಟ 2 ಚಿತ್ರದ ಬಗ್ಗೆ ಸಾಕಷ್ಟು ಅಪ್ಡೇಟ್​ಗಳನ್ನ ನೀಡಿದ್ದ ಭಟ್ಟರು ಸಿನಿಮಾಗೆ ನಾಯಕಿಯರು ಯಾರು ಅನ್ನೋ ಬಗ್ಗೆ ಕುತೂಹಲ ಕಾಯ್ದುಕೊಂಡಿದ್ದರು.

ಗಾಳಿಪಟ 2 ಚಿತ್ರದಲ್ಲಿ ಗಣೇಶ್, ದಿಗಂತ್ ಮುಂದುವರೆದಿದ್ದು, ರಾಜೇಶ್ ಕೃಷ್ಣನ್ ಬದಲಾಗಿ ನಟ ನಿರ್ದೇಶಕ ಪವನ್ ಕುಮಾರ್ ಕಾಣಿಸಿಕೊಳುತ್ತಿದ್ದಾರೆ. ಗಾಳಿಪಟ 2 ಚಿತ್ರದ ನಾಯಕರು, ಶೂಟಿಂಗ್, ಪೋಸ್ಟರ್ ಹೀಗೆ ಈ ಎಲ್ಲಾ ವಿಚಾರಗಳ ಬಗ್ಗೆ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದ ಭಟ್ಟರು ನಾಯಕಿಯರ ಬಗ್ಗೆ ಕುತೂಹಲ ಉಳಿಸಿಕೊಂಡಿದರು.

ಸದ್ಯಭಟ್ಟರ ಜೊತೆ ಗಾಳಿಪಟ ಹಾರಿಸ್ಲಿಕ್ಕೆ ರೆಡಿಯಾಗಿರೋ ನಟಿಯರು ಯಾರು ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ತಮಿಳು ಮರಾಠಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರೋ ವೈಭವಿ ಶಾಂಡಿಲ್ಯ, ಮತ್ತು ಮಳಯಾಲಂನ ಸಂಯುಕ್ತಾ ಮೆನನ್ ಗಾಳಿಪಟ 2 ಚಿತ್ರದಲ್ಲಿ ನಾಯಕಿಯರಾಗಿ ಆ್ಯಡ್​ ಆನ್​ ಆಗಿದ್ದಾರೆ.

ಈ ಹಿಂದೆಯೇ ಚಿತ್ರದಲ್ಲಿ ನಟಿಯರಾದ ಶರ್ಮಿಳಾ ಮಾಂಡ್ರೆ, ಸೋನಲ್​ , ಜೊತೆಯಾಗಿದ್ದು ಗೊತ್ತಿತ್ತು..ಅದ್ರ ಜೊತೆಗೆ ಇದೀಗ ಮತ್ತಿಬ್ಬರು ನಾಯಕಿಯರು ಸೇರಿಕೊಂಡಿದ್ದಾರೆ. ಸದ್ಯ ಗಾಳಿಪಟ 2 ಕಜಕಿಸ್ತಾನ ಹಾಗೂ ಯೂರೋಪ್ ನ ಕೆಲ ಸುಂದರತಾಣಗಳಲ್ಲಿ ನಡಿತಿದೆ.

ಇನ್ನು ಗಾಳಿಪಟ ಚಿತ್ರ ತೆರೆಕಂಡು,ಹದಿಮೂರು ವರ್ಷಗಳ ನಂತರ ಗಾಳಿಪಟ 2 ಚಿತ್ರ ರೆಡಿಯಾಗ್ತಾ ಇದೆ. ಆದರೆ ಇಷ್ಟು ನಾಯಕಿಯರಲ್ಲಿ ಯಾರು ಯಾರಿಗೆ ಜೋಡಿಯಾಗಿದ್ದಾರೆ ಅನ್ನೋದಿನ್ನ ಕುತೂಹಲವಾಗೇ ಉಳಿದಿದೆ.

Also read:  ನೂರು ಕೋಟಿ ಬಜೆಟ್​ನಲ್ಲಿ ರೆಡಿಯಾಗಲಿದೆ 'ಪುಣ್ಯಕೋಟಿ'

Latest article