Friday, January 21, 2022

ಹೃತಿಕ್ 48ನೇ ಹುಟ್ಟುಹಬ್ಬಕ್ಕೆ ‘ವಿಕ್ರಮ್​ ವೇದ’ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ

Must read

ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಜನವರಿ 10ರಂದು ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

 

View this post on Instagram

 

A post shared by Hrithik Roshan (@hrithikroshan)

ಹೃತಿಕ್ ರೋಷನ್ ಅವರ ಜನ್ಮದಿನದಂದು ಅವರ ಮುಂದಿನ ಚಿತ್ರ ‘ವಿಕ್ರಮ್​ ವೇದ’ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಮಾಡಿದ್ದಾರೆ. ಇದರ ಪೋಸ್ಟ್​ನನ್ನು ಹೃತಿಕ್​ ತಮ್ಮ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ. ವಿಕ್ರಮ್ ವೇದ ಚಿತ್ರದಲ್ಲಿ ಹೃತಿಕ್ ರೋಷನ್ ಅವರ ಪಾತ್ರದ ಹೆಸರು ವೇದ. ವಿಕ್ರಮ್ ವೇದ ಚಿತ್ರಕ್ಕೆ ಸಂಬಂಧಿಸಿದ ಹೃತಿಕ್ ರೋಷನ್ ಅವರ ಈ ಫಸ್ಟ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ವಿಕ್ರಮ್ ವೇದ ಚಿತ್ರವು ಐಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಅವರ 2017ರ ತಮಿಳು ಚಿತ್ರದ ಹಿಂದಿ ರೀಮೇಕ್. ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶನದಲ್ಲಿ ಈ ಹಿಂದಿ ರಿಮೇಕ್ ಚಿತ್ರ ತಯಾರಾಗುತ್ತಿದೆ. ಚಿತ್ರದಲ್ಲಿ ಹೃತಿಕ್ ರೋಷನ್ ಹೊರತಾಗಿ ನಟ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Latest article