Friday, January 21, 2022

ಧನಂಜಯ 25ನೇ ಸಿನಿಮಾದ ಶೀರ್ಷಿಕೆ ಅನಾವರಣ: ಮತ್ತೆ ಪೊಲೀಸ್‌ ಪಾತ್ರದಲ್ಲಿ ‘ಡಾಲಿ’

Must read

ನಟ ಡಾಲಿ ಧನಂಜಯ​ ಸಂಕ್ರಾಂತಿ ಹಬ್ಬದ ದಿನದಂದು ತಮ್ಮ 25ನೇ ಸಿನಿಮಾದ ಶೀರ್ಷಿಕೆ ಅನಾವರಣ​ ಮಾಡಿದ್ದಾರೆ. ಡಾಲಿ 25ನೇ ಚಿತ್ರಕ್ಕೆ ‘ಹೊಯ್ಸಳ’ ಎಂದು ಹೆಸರಿಡಲಾಗಿದೆ.

ಈ ಸಿನಿಮಾವನ್ನು ಕೆ.ಆರ್.ಜಿ ನಿರ್ಮಾಣ ಸಂಸ್ಥೆ ಬ್ಯಾನರ್‌ ಅಡಿ ತಯಾರು ಮಾಡಲಾಗುತ್ತಿದೆ. ಇತ್ತೀಚೆಗೆ ರಿಲೀಸ್ ಜನರ ಮನಗೆದ್ದ ‘ರತ್ನನ್ ಪ್ರಪಂಚ’ ಸಿನಿಮಾದ ನಿರ್ಮಾಪಕರಾದ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ನಿರ್ದೇಶನದ ಜವಾಬ್ಧಾರಿಯನ್ನು ಈ ಹಿಂದೆ ‘ಗೀತಾ’ ಚಿತ್ರ ನಿರ್ದೇಶಿಸಿದ್ದ ವಿಜಯ್ ಎನ್ ಹೊರಲಿದ್ದಾರೆ. ದಕ್ಷಿಣ ಭಾರತದ ಬಹಳ ಯಶಸ್ಸಿನ ಸಂಗೀತ ನಿರ್ದೇಶಕರಾದ ಎಸ್ .ಎಸ್ .ತಮನ್ ಈ ಸಿನಿಮಾಕ್ಕೆ ನೀಡಲಿದ್ದು, ದೀಪು.ಎಸ್.ಕುಮಾರ್ ಸಂಕಲನ ಮಾಡಲಿದ್ದಾರೆ.

‘ಹೊಯ್ಸಳ’ ಚಿತ್ರ ಧನಂಜಯ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈ ಚಿತ್ರದ ಬಹುತೇಕ ಶೂಟಿಂಗ್​ ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ. ಪೊಲೀಸ್​ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಕಲಾವಿದರ ಆಯ್ಕೆ ಪ್ರಗತಿಯಲ್ಲಿದೆ.

Latest article