ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಯುವಕನೋರ್ವ ಬೆತ್ತಲೆಯಾಗಿ ಓಡಾಡುವ ಮೂಲಕ ಅನುಚಿತವಾಗಿ ವರ್ತಿಸಿದ್ದಾನೆ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಗಾಂಜಾ ಮತ್ತಿನಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ನುಗ್ಗಿದ ರಾಮ್ಕುಮಾರ್ ಎಂಬ ಯುವಕ, ದೇವರ ಗರ್ಭಗುಡಿ ಮುಂದೆ ಬೆತ್ತಲಾಗಿ ಅಶ್ಲೀಲವಾಗಿ ವರ್ತಿಸಿದ್ದಾನೆ. ಅಪ್ ಪಕ್ಷದ ಮುಖಂಡನಾಗಿರುವ ರಾಮ್ಕುಮಾರ್ ವರ್ತನೆಯಿಂದ ಮುಜುಗರಕ್ಕೊಳಗಾದ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ, ಆತನನ್ನು ತಡೆಯಲು ಮುಂದಾದರು. ಆದರೂ ಬಿಡದೇ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದ್ದು, ಅಲ್ಲಿದ್ದವರು ಆತನನ್ನು ತಡೆದಿದ್ದಾರೆ. ಬಳಿಕ ಗರ್ಭಗುಡಿ ಮುಂದೆಯೇ ಕುಳಿತಕೊಂಡು ನಾನೇ ರಾಮ, ನಾನೇ ಅಲ್ಲಾ, ನಾನೇ ಏಸು ಎಂದು ಕಿರುಚಾಡಿದ್ದಾನೆ.
ರಾಮ್ಕುಮಾರ್ ಕಳೆದ 15 ದಿನಗಳಿಂದ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ನಿನ್ನೆಯೂ ಗಾಂಜಾ ಸೇವನೆ ಮಾಡಿ ದೇವಸ್ಥಾನ ಒಳ ಭಾಗಕ್ಕೆ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆಯ ದೃಶ್ಯಾವಳಿಗಳು ಸೆರೆಯಾಗಿವೆ.