Saturday, July 2, 2022

ಅಗ್ನಿಪಥ್ ಯೋಜನೆಯನ್ನ ವಿರೋಧಿಸುವ ಅಗತ್ಯ ಇಲ್ಲ: ಎಸ್‌.ಎಂ.ಕೃಷ್ಣ

Must read

ಮಂಡ್ಯ: ಅಗ್ನಿಪಥ್ ಯೋಜನೆಗೆ ಯಾಕೆ ವಿರೋಧ ಮಾಡ್ತಾರೆ ಗೊತ್ತಾಗ್ತಿಲ್ಲ ಎಂದು ಹೇಳುವ ಮೂಲಕ ಅಗ್ನಿಪಥ್ ವಿರುದ್ಧದ ಹೋರಾಟಕ್ಕೆ ಮಾಜಿ ಸಿಎಂ, ವಿದೇಶಾಂಗ ಖಾತೆ ಮಾಜಿ ಸಚಿವ ಎಸ್‌.ಎಂ.ಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.

ಮಂಡ್ಯದ ಮದ್ದೂರಿನ ಸೋಮನಹಳ್ಳಿ ನಿವಾಸದಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಯೋಜನೆಯನ್ನ ವಿರೋಧಿಸುವ ಅಗತ್ಯ ಇಲ್ಲ. ಸೈನ್ಯಕ್ಕೆ ಸೇರಿದವರು 4 ವರ್ಷದ ನಂತರ ನಿವೃತ್ತಿಯಾಗಿ, ಬೇರೆ-ಬೇರೆ ಕಸುಬು ಮಾಡಬಹುದು. ಅದಕ್ಕೆ ಯಾವುದೇ ನಿಷೇಧ ಇಲ್ಲ. ಅಮೆರಿಕಾ, ಇಂಗ್ಲೆಂಡ್​ನಲ್ಲಿ ಪ್ರತಿಯೊಬ್ಬರು 2 ವರ್ಷ ಸೈನ್ಯದಲ್ಲಿ ಸೇವೆ ಮಾಡ್ತಿದ್ದಾರೆ. ಮುಂದುವರಿದ ದೇಶಗಳೆಲ್ಲವು ಇದನ್ನು ಅಳವಡಿಸಿಕೊಂಡು ಯಶಸ್ಸು ಕಂಡಿವೆ.

ಅಗ್ನಿಪಥ್ ಯೋಜನೆ ವಿನೂತನವಾದ ಯೋಜನೆ. ಇದಕ್ಕೆ ಯಾವುದೇ ರಾಜಕೀಯ ಇಲ್ಲ. ಅಗ್ನಿಪಥ್ ಯೋಜನೆ ಅವಶ್ಯಕತೆ ಇದೆ. ಇದನ್ನ ಕಾರ್ಯರೂಪಕ್ಕೆ ತರಬೇಕು ಎಂದಿದ್ದಾರೆ.

Latest article