ಬೆಂಗಳೂರು: ಮಂಡ್ಯ ಮತಪ್ರಮಾಣ ಕಡಿಮೆಯಾಗಿರುವುದು ದುರದೃಷ್ಟಕರ. ಈ ಬಗ್ಗೆ ನಾವು ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂಬ ಸಚಿವ ಸುಧಾಕರ್ ಹೇಳಿಕೆ ವಿರುದ್ಧ ಸಚಿವ ನಾರಾಯಣ ಗೌಡ ಕಿಡಿಕಾರಿದ್ದಾರೆ.
ಸುಧಾಕರ್ ನಮ್ಮ ಲೀಡರ್ ಆ..? ಅವರು ಅವರ ಕ್ಷೇತ್ರದ ಬಗ್ಗೆ ಮಾತನಾಡಲಿ. ನಾವು ನಮ್ಮ ಕ್ಷೇತ್ರದ ಬಗ್ಗೆ ಹೇಳುತ್ತೇವೆ. ಮಂಡ್ಯದ ಬಗ್ಗೆ ನನಗೆ ಗೊತ್ತು ನಾನು ಮಾತನಾಡುತ್ತೇನೆ. ಅವರ ಕೆಲಸ ಅವರು ಮಾಡಲಿ ಎಂದು ಸುಧಾಕರ್ ವಿರುದ್ಧ ನಾರಾಯಣ್ ಗೌಡ ಗರಂ ಆಗಿದ್ದಾರೆ.
ಇನ್ನು ನಮ್ಮ ಕ್ಷೇತ್ರದ ಬಗ್ಗೆ ಅವರಿಗೇನು ಗೊತ್ತು ರೀ. ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇವೆ. ಪಕ್ಷದ ಬೆಳೆಸುವ ಜವಾಬ್ದಾರಿ ಇದೆ. ನಾನು ಜವಾಬ್ದಾರಿಯಲ್ಲೇ ಇದ್ದೇನೆ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.