Tuesday, May 17, 2022

ಕ್ರಿಸ್​ಮಸ್ ಆಚರಣೆ: ಶಾಲೆ ಧರ್ಮಾತೀತವಾಗಿರಬೇಕೆಂದು ಹಿಂದೂ ಪರ ಸಂಘಟನೆ ಅಡ್ಡಿ

Must read

ಮಂಡ್ಯ: ಖಾಸಗಿ ಶಾಲೆಯಲ್ಲಿ ಕ್ರಿಸ್​ಮಸ್ ಆಚರಣೆಗೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅಡ್ಡಿ ಮಾಡಿರುವ ಘಟನೆ ಪಾಂಡವಪುರದ ನಿರ್ಮಲಾ ಕಾನ್ವೆಂಟ್​​ನಲ್ಲಿ ನಡೆದಿದೆ.

ಕ್ರಿಸ್​ಮಸ್ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಆಕರ್ಷಿಸುತ್ತಿದ್ದಾರೆ. ಇದರಿಂದ ಮಕ್ಕಳ ನಡುವಳಿಕೆಯಲ್ಲಿ ಬದಲಾವಣೆ ಕಾಣುತ್ತಿದೆ. ಬಾಲ್ಯದಲ್ಲೇ ಕ್ರೈಸ್ತ ಧರ್ಮಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಶಾಲಾ, ಕಾಲೇಜುಗಳು ಧರ್ಮಾತೀತವಾಗಿರಬೇಕು. ನಿರ್ಮಲ ಕಾನ್ವೆಂಟ್​ನಲ್ಲಿ ಕ್ರಿಸ್​ಮಸ್ ಆಚರಣೆ ಹೆಸರಿನಲ್ಲಿ ಧರ್ಮ ಪ್ರಚಾರ ಮಾಡಲಾಗುತ್ತಿದೆ ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಕಿಡಿಕಾರಿದ್ದಾರೆ.

ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿಗೆ ತರಾಟೆ ತೆಗೆದುಕೊಂಡು ಹಿಂದೂ ಕಾರ್ಯಕರ್ತರು, ಒಂದು ವೇಳೆ ಶಾಲೆಯಲ್ಲಿ ಕ್ರಿಸ್​ಮಸ್ ಆಚರಣೆ ಮಾಡಲೇಬೇಕು ಎನ್ನುವುದಾದರೆ ಹಿಂದೂ ದೇವರ ಭಾವಚಿತ್ರವನ್ನು ಶಾಲೆಯಲ್ಲಿ ಹಾಕಿ ಎಂದು ಪಟ್ಟುಹಿಡಿದಿದ್ದಾರೆ.

Latest article