Saturday, July 2, 2022

ಗ್ರಾ.ಪಂ ಅಧ್ಯಕ್ಷ ಆಕಾಂಕ್ಷಿಯನ್ನು ಕಿಡ್ನ್ಯಾಪ್ ಮಾಡಿ ತಾನೇ ಅಧ್ಯಕ್ಷನಾದ ಮತ್ತೊಬ್ಬ..!

Must read

ಮಂಡ್ಯ: ಗ್ರಾಮ ಪಂಚಾಯಿತಿ ಅಧ್ಯಕ್ಷ ಆಕಾಂಕ್ಷಿಯನ್ನು ಕಿಡ್ನ್ಯಾಪ್​ ಮಾಡಿ, ಮೈಸೂರಿನ ಲಾಡ್ಜ್ ಒಂದರಲ್ಲಿ ಕೂಡಿಟ್ಟು ಚುನಾವಣೆ ನಂತರ ಬಿಡುಗಡೆ ಮಾಡಿರುವ ಆರೋಪ ಕೇಳಿಬಂದಿದೆ.

ಜೂನ್​ 1ರಂದು ಮದ್ದೂರು ತಾಲೂಕಿನ ಮರಳಿಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿತ್ತು. ಮೇ 30ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಚಲುವರಾಜು ಎಂಬುವವರನ್ನು ಅಪಹರಣ ಮಾಡಲಾಗಿದೆ. ನಂತರ ಮೈಸೂರಿನ ಲಾಡ್ಜ್ ಒಂದರಲ್ಲಿ ಚಲುವರಾಜು ಅವರನ್ನು ಕೂಡಿಟ್ಟು, ಕೊಲೆ ಬೆದರಿಕೆ ಹಾಕಲಾಗಿದೆ. ಚಲುವರಾಜು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಮಾಡಿದ್ದಾರೆ. ಜೂನ್​ 1ರಂದು ಚುನಾವಣೆ ಮುಗಿದ ಬಳಿಕ ಸತ್ಯ ಆ್ಯಂಡ್​ ಟೀಮ್​ ಚಲುವರಾಜು ಅವರನ್ನು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

ಇದೀಗ ವಾಮ ಮಾರ್ಗದಲ್ಲಿ ಅಧ್ಯಕ್ಷ ಆದವನ ವಿರುದ್ಧ ಚಲುವರಾಜು ಬೆಸಗರಹಳ್ಳಿ ಪೊಲೀಸ್ ಠಾಣೆ ಹಾಗೂ ಜಿಪಂ ಸಿಇಒಗೆ ದೂರು ನೀಡಿದ್ದಾರೆ. ಜೊತೆಗೆ ಚುನಾವಣಾ ಪ್ರಕ್ರಿಯೆ ರದ್ದು ಮಾಡಿ, ಮರು ಚುನಾವಣೆಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಗ್ರಾ.ಪಂ ಅಧ್ಯಕ್ಷ ಸೇರಿ 7 ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

Latest article