ನೈಟ್ ಪಾರ್ಟಿಗಳಿಗೆ ಯಾವ ಐಶೇಡ್ ಸೂಟ್​ ಆಗುತ್ತೆ..?

ನೈಟ್ ಪಾರ್ಟಿಗಳಿಗೆ ಯಾವ ಐಶೇಡ್ ಸೂಟ್​ ಆಗುತ್ತೆ..?

ಪಾರ್ಟಿಗಳಿಗೆ ಗ್ಲಿಟರ್ ಐಶೇಡ್ ಒಂದೇ ಆಯ್ಕೆಯಲ್ಲ

 ನಮ್ಮೆದುರಿಗಿರುವ ವ್ಯಕ್ತಿಯನ್ನು ಮೊದಲು ಆಕರ್ಷಿಸುವ ದೇಹದ ಅಂಗ ಎಂದರೆ ಕಣ್ಣು. ಹೆಣ್ಣಿನ ಕಣ್ಣಿನ ವರ್ಣನೆಯೇ ಹಾಡಿನ ರೂಪ ಪಡೆದುಕೊಳ್ಳುತ್ತದೆ. ದೇಹಸೌಂದರ್ಯದಲ್ಲಿ ಕಣ್ಣಿಗಿರುವ ಪ್ರಾಮುಖ್ಯತೆಯೇ ಅಂತದ್ದು ಹೀಗಿರುವಾಗ ಕಣ್ಣಿಗೂ ಮುಖದ ಮೇಕಪ್​ಗೆ ಸರಿಹೊಂದುವ ಲುಕ್ ಕೊಡೋದು ತುಂಬಾನೇ ಮುಖ್ಯ.

ಉಡುಗೆಯಂತೆ ಕಣ್ಣಿನ ಮೇಕಪ್ ಟ್ರೆಂಡ್ ಕೂಡ ಬದಲಾಗುತ್ತಿರುತ್ತದೆ. ನೈಟ್ ಪಾರ್ಟಿ ಎಂದಾಗ ನಾವೇ ಹೈಲೈಟ್ ಆಗಬೇಕೆಂದು ಬಳಸುವ ಗ್ಲಿಟರ್ ಐಶೇಡ್ ಈಗ ಔಟ್ ಡೇಟೆಡ್ ಅನ್ನೋದು ನಿಮಗೆ ತಿಳಿದಿರಲಿ. ಹಾಗಾದ್ರೆ ನೈಟ್ ಪಾರ್ಟಿಯ ಟ್ರೆಂಡಿಂಗ್ ಲುಕ್ ಯಾವುದು ಅನ್ನೋದು ನಿಮ್ಮ ಪ್ರಶ್ನೆಯಾದ್ರೆ ನೀವು ಸ್ಮೋಕಿ ಆ್ಯಂಡ್​ ಡಬಲ್ ಶೇಡ್ ಬಗ್ಗೆ ತಿಳಿಯಿರಿ.

ಗ್ಲಿಟರ್ ನಿಮಗೆ ಹೈಲೈಟ್ ಲುಕ್ ನೀಡಬಹುದು ಆದರೆ ಅದನ್ನ ಎಲ್ಲಾ ಪಾರ್ಟಿಗಳಿಗೆ ಹಾಗೂ ಉಡುಗೆಗೆ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಆದರೆ ನಾವು ಹೇಳಲು ಹೊರಟಿರುವ ಸ್ಮೋಕಿ ಹಾಗೂ ಮೈಲ್ಡ್ ಡಬಲ್ ಶೇಡ್​ಗಳು ಸಾಮಾನ್ಯವಾಗಿ ಪಾರ್ಟಿವೇರ್ಗಳಿಗೆ ಸ್ಟಾಂಡರ್ಡ್​ ಲುಕ್ ಕೊಡೋದಲ್ಲದೇ ಕಣ್ಣುಗಳನ್ನು ಇನ್ನಷ್ಟು ಆಕರ್ಷಣೀಯವಾಗಿಸುತ್ತದೆ.

Related Stories

No stories found.
TV 5 Kannada
tv5kannada.com