Tuesday, May 17, 2022

ಹಾಲಿವುಡ್ ಸುಂದರಿ ವರ್ಸಸ್ ಪ್ಲಾಸ್ಟಿಕ್ ಸರ್ಜರಿ

Must read

ಹಾಲಿವುಡ್‌ನಲ್ಲಿ ಪ್ಲಾಸ್ಟಿಕ್ ಸರ್ಜರಿಯು ಬಹುತೇಕ ಬಹಿರಂಗ ರಹಸ್ಯವಾಗಿದೆ ಬಹಳಷ್ಟು ಸೆಲೆಬ್ರಿಟಿಗಳು ತಮ್ಮ ರೂಪಾಂತರಗಳನ್ನು ಗೌರವದ ಬ್ಯಾಡ್ಜ್ ಎಂದೇ ಪರಿಗಣಿಸುತ್ತಾರೆ. ತಪ್ಪೇನಿಲ್ಲ, “Life journey is all about converting negetive into positive ” ಅಂತಾನೆ ನಂಬುವವರು ತಮ್ಮಲ್ಲಿನ ಮೈನಸ್​ಗಳನ್ನು ಪ್ಲಸ್ ಮಾಡುವ ಬರದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುವವರೇ ಹೆಚ್ಚು. ಕಾರಣ ಹೆಣ್ಣಿಗೆ ತನ್ನ ಸೌಂದರ್ಯ ಆಕೆಯಲ್ಲಿನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂಬುವುದನ್ನು ಇವರು ಬಲವಾಗಿ ನಂಬಿದಂತಿದೆ.

ಹಾಗೆಂದು ಈ ರೂಪಾಂತರ ಹಾಲಿವುಡ್​ಗೆ ಮಾತ್ರ ಸೀಮಿತವಾಗಿಲ್ಲ. ಆದರೆ, ಅಲ್ಲಿ ಯಾವುದೇ ಮುಜುಗರವಿಲ್ಲದೆ ಈ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ. ಹಾಗೆ ನೋಡಲು ಹೋದರೆ ಬಾಲಿವುಡ್​ನಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲೆಂದೇ 12 ವರ್ಷಗಳ ಹಿಂದೆಯೇ ತಾನೂ ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿರುವುದಾಗಿ ಖುದ್ದು ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ಎಲ್ಲರ ಹುಬ್ಬೇರಿಸಿತ್ತು.

ಸದ್ಯ ಹಾಲಿವುಡ್‌ನಲ್ಲಿ ಲುಕ್​ಗಾಗಿ ಎಷ್ಟು ಖರ್ಚು ಮಾಡಲಾಗುತ್ತಿದೆ ಅನ್ನೋದನ್ನ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ. 66 ವರ್ಷದ ಫ್ಯಾಷನ್ ಐಕಾನ್ ಡೊನಾಟೆಲ್ಲಾ ವರ್ಸೆಸ್​ ಹೆಸರು ಕೇಳಿರುತ್ತೀರಾ. ಆಕೆಯ ಹೆಸರಿಗೆ ಸಾಕಷ್ಟು ಅದೃಷ್ಟವಿದೆ ಅಂತಾನೆ ಜನ ಮಾತನಾಡಿಕೊಳ್ತಾರೆ. ಡೊನೆಟೆಲ್ಲಾ ಅಂದಾಜು $ 200 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಕೇವಲ ಲೇಸರ್ ಮತ್ತು ಫಿಲ್ಲರ್‌ಗಳಿಗಾಗಿ ಅಂದಾಜು $ 25,000 ಖರ್ಚು ಮಾಡುತ್ತಾ ಎನ್ನುವುದು ಡೊನೆಟೆಲ್ಲಾ ಅವರೇ ಹೇಳಿಕೊಂಡ ಸತ್ಯ.

Latest article