Tuesday, May 17, 2022

ಉತ್ತಮ ಅಂಕ ಗಳಿಸಲು 5 ಸುಲಭ ಸೂತ್ರ ಅನುಸರಿಸಿ

Must read

ಪ್ರತಿಯೊಬ್ಬ ಪೋಷಕರು ತಮ್ಮ ಮಗುವು ಅಧ್ಯಯನದಲ್ಲಿ ಮುಂಚೂಣಿಯಲ್ಲಿರಬೇಕು ಮತ್ತು ಒಳ್ಳೆಯ ಅಂಕ ಪಡೆಯಬೇಕೆಂದು ಬಯಸುತ್ತಾರೆ , ಆದರೆ ಮಗು ಉತ್ತಮ ಅಧ್ಯಯನ ನಡೆಸಿದ ಹೊರತಾಗಿಯೂ ನಿರೀಕ್ಷೆಯ ಅಂಕ ಸಿಗದೆ ನಿರಾಶೆಗೊಳ್ಳುತ್ತಾರೆ . ಏಕೆಂದರೆ ಪ್ರತಿಯೊಬ್ಬರೂ ಅವನಿಗೆ ಅಧ್ಯಯನ ಮಾಡುವುದು ಅಗತ್ಯವೆಂದು ಹೇಳುತ್ತಾರೆಯೇ ಹೊರತು ಅಧ್ಯಯನ ವಿಧಾನ ಹೇಗಿರಬೇಕು ಎಂದು ಹೇಳುವುದಿಲ್ಲ . ಕೇವಲ ಓದುವುದು ಮುಖ್ಯವಲ್ಲ ಸರಿಯಾದ ರೀತಿಯ ಓದು ಮಾತ್ರವೇ ಉತ್ತಮ ಫಲಿತಾಂಶ ನೀಡುತ್ತದೆ. ಆದ್ದರಿಂದ ಆದ್ಯಯನದಲ್ಲಿ ಅನುಸರಿಸಬೇಕಾದ ಆಗತ್ಯ ವಿಷಗಳ ಕಡೆ ಗಮನ ಹರಿಸಿ

ಅಧ್ಯಯನ ಸಲಹೆ: 1 – ಆದ್ಯಯನಕ್ಕೆ ಯಾವುದೇ ಸಮಯವಿಲ್ಲ ಅದು ನಿಮ್ಮ ಮೂಡ್ ಆದರಿಸಿರುತ್ತದೆ. ಬೆಳಗ್ಗಿನ ಜಾವ ಅಧ್ಯಯನಕ್ಕೆ ಸೂಕ್ತ ಎನ್ನುತ್ತಾರೆ ಆದರೆ ಇದು ಎಲ್ಲರಿಗೂ ಅನ್ವಯ ಆಗಬೇಕೆಂದೇನಿಲ್ಲ. ಕೆಲವರು ರಾತ್ರಿ ಗೂಬೆಯಾಗಿರಬಹುದು ಅಂತವರು ರಾತ್ರಿ ಸಮಯ ಓದಿದ ಪ್ರತಿ ವಿಷಯವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾರೆ ಅವರ ಮೆದುಳು ಅತೀ ಚುರುಕಾಗಿ ಕೆಲಸ ನಿರ್ವಹಿಸುತ್ತದೆ . ಹಾಗಾಗಿ ಓದಿಗೆ ನಿಮಗೆ ಸರಿಹೊಂದುವ ಸಮಯ ನೀವೇ ನಿರ್ಧರಿಸಿ.

ಅಧ್ಯಯನ ಸಲಹೆ 2 : ಗ್ರೂಪ್ ಸ್ಟಡಿ ಸಹಾಯ ಪಡೆಯಿರಿ ಒಳ್ಳೆಯ ಗುಂಪನ್ನು ಆರಿಸಿ. ಯಾವಾಗ ನೀವು ಸರಿಯಾದ ಅಧ್ಯಯನ ಗುಂಪನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ, ಆಗ ನೀವು ಕಷ್ಟಕರವಾದ ವಿಷಯಗಳನ್ನು ಸುಲಭವಾಗಿ ಪರಿಹರಿಸಬಹುದು. ಈ ನುಡಿಗಟ್ಟು ಯಾವಾಗಲೂ ನೆನಪಿಡಿ,”ಒಂದು ತಲೆಗಿಂತ ಎರಡು ತಲೆಗಳು ಮತ್ತು ಎರಡು ತಲೆಗಳಿಗಿಂತ ಮೂರು ತಲೆಗಳು ಉತ್ತಮ.” ಆದರೆ ನಿಮ್ಮ ಗುಂಪಿನಲ್ಲಿ ಓದಿನ ಕಡೆ ಆಸಕ್ತಿ ತೋರಿಸುವ ವಿದ್ಯಾರ್ಥಿಗಳನ್ನೇ ಆರಿಸಿಕೊಳ್ಳಿ.

ಅಧ್ಯಯನ ಸಲಹೆ 3. ಸಾಧ್ಯವಾದಾಗಲೆಲ್ಲಾ ತರಗತಿಯ ಚರ್ಚೆಯಲ್ಲಿ ಭಾಗವಹಿಸಿ ನಿಮ್ಮ ಮನಸ್ಸಿನಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ಅದನ್ನು ಕೇಳಬೇಕು, ನೀವು ವರ್ಗ ಚರ್ಚೆಯಲ್ಲಿ ಭಾಗವಹಿಸಿದರೆ ಇತರ ಜನರು ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ನೀವು ಗಮನ ಹರಿಸುತ್ತೀರಿ. ನಿಮಗೆ ಬೇಕಿರುವ ವಿಷಯಗಳ ಆಳವನ್ನು ಚರ್ಚೆಯ ಮೂಲಕ ತಿಳಿಯಬಹುದು

ಅಧ್ಯಯನ ಸಲಹೆ 4. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ

ಓದಿನ ನಡುವೆ ಅಂತರ ತೆಗೆದುಕೊಳ್ಳುವುದು ಅತೀ ಮುಖ್ಯ. ಓದಿನ ಟಾರ್ಗೆಟ್ ಕಡೆಮೆ ಇರಲಿ ಒಮ್ಮೆ ಗೆ ಒಂದು ವಿಷಯದ ಬಗ್ಗೆ ಮಾತ್ರವೇ ಗಮನ ಹರಿಸಿ ಯಾಕೆಂದರೆ ಮೆದುಳಿಗೂ ಆಯಾಸವಾಗುತ್ತದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

Also read:  ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ಸಾಮಾಜಿಕ ಜಾಲತಾಣಗಳ ಅಗತ್ಯವಿಲ್ಲ, ಅವರಿಗೆ ಪ್ರಧಾನಿ ಮೋದಿ ಇದ್ದಾರೆ: ರಮ್ಯಾ

ಅಧ್ಯಯನ ಸಲಹೆ 5. ಯಾರೊಬ್ಬರ ಸಹಾಯವನ್ನು ಪಡೆಯಲು ನಾಚಿಕೆಪಡಬೇಡಿ ಆರಂಭದಲ್ಲಿ ಅಥವಾ ನಂತರ ಪ್ರತಿಯೊಬ್ಬ ವಿದ್ಯಾರ್ಥಿಯು ಇನ್ನೊಬ್ಬರ ಸಹಾಯದ ಅಗತ್ಯವಿರುತ್ತದೆ . ಕೆಲವರಿಗೆ ಕೆಲವು ವಿಷಯಗಳು ಅತೀ ಕಷ್ಟೆನಿಸುತ್ತದೆ ಅಂತಹ ಸಂದರ್ಭದಲ್ಲಿ ಇನ್ನೊಬ್ಬರ ಸಹಾಯ ಕೇಳಲು ಯಾವುದೇ ಅಂಜಿಕೆ ಬೇಡ.

ಅಧ್ಯಯನದಲ್ಲಿ ಸವಾಲುಗಳು ಸರ್ವೇಸಾಮಾನ್ಯ ಆಗೆಲ್ಲಾ ಧೈರ್ಯಗುಂದದೆ ಮುಕ್ತವಾಗಿ ಹಿರಿಯರೊಂದಿಗೆ ಹಂಚಿಕೊಳ್ಳಿ ನಿಮ್ಮ ಅಭ್ಯಾಸದ ಹಾದಿ ಸುಲಭವಾಗಿಸಿ.

Latest article