ಮಂಗಳೂರಿನ ಮೀನುಗಾರರ ಮುಖದಲ್ಲಿ ಸಂತಸದ ಛಾಯೆ, ಕೈ ತುಂಬಾ ದುಡಿಯುತ್ತಿರುವ ಕಡಲ ವೀರರು!

ಮಂಗಳೂರಿನ ಮೀನುಗಾರರ ಮುಖದಲ್ಲಿ ಸಂತಸದ ಛಾಯೆ, ಕೈ ತುಂಬಾ ದುಡಿಯುತ್ತಿರುವ ಕಡಲ ವೀರರು!

ಮಂಗಳೂರು: ರಫ್ತು ಮಾಡಬಹುದಾದ ಹಲವಾರು ತಳಿಯ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿದ್ದು ಕೊರೊನ ಹೊಡೆತದಿಂದ ತತ್ತರಿಸಿದ್ದ ಮೀನುಗಾರರ ಮುಖದಲ್ಲಿ ಈಗ ಸಂತೋಷ ತುಂಬಿದೆ.

ಕಳೆದ ಒಂದು ವರ್ಷದಿಂದ ಒಂದರ ನಂತರ ಒಂದರಂತೆ ಮೀನುಗಾರಿಕೆಯು ತೊಂದರೆಗೊಳಗಾಗಿದ್ದು, ಟ್ರಾಲ್ ಬೋಟ್ ಆಪರೇಟರ್‌ಗಳು ಈ ಬಾರಿ ಸ್ಕ್ವಿಡ್ಸ್, ರಾಣಿ ಮೀನು, ಇತ್ಯಾದಿ ಪ್ರಭೇದಗಳ ಮೀನು ಕಡಲಲ್ಲಿ ಸಿಗುತ್ತಿದ್ದು, ಜಿಲ್ಲೆಯ ಮೀನು ಪ್ರಿಯರು ಹಲವಾರು ತಳಿಗಳ ತಾಜಾ ಮೀನುಗಳನ್ನು ನೋಡಿ ಖುಷಿ ಪಡುತ್ತಿದ್ದಾರೆ, ಮತ್ಸ್ಯ ಪ್ರಿಯರು ಈ ಮೀನುಗಳನ್ನು ಸವಿದು ಆನಂದಿಸುತ್ತಿದ್ದಾರೆ.

ರಫ್ತು ಮಾಡಬಹುದಾದ ಮೀನುಗಳನ್ನು ಕೊಚ್ಚಿ, ಗೋವಾ ಮತ್ತು ಗುಜರಾತ್‌ಗೆ ಕಳುಹಿಸಲಾಗುತ್ತಿದ್ದು, ಡೀಸೆಲ್ ಸಬ್ಸಿಡಿ ಸಮಸ್ಯೆಯನ್ನು ಬಗೆಹರಿಸಿದ ನಂತರ 90 ಪ್ರತಿಶತ ದೋಣಿಗಳು ಮೀನುಗಾರಿಕೆ ಚಟುವಟಿಕೆಗಳನ್ನು ಆರಂಭಿಸಿವೆ. ಎರಡು ವರ್ಷಗಳ ಅಂತರದ ನಂತರ, ಕೋವಿಡ್, ಕಾರ್ಮಿಕರ ಕೊರತೆ, ಚಂಡಮಾರುತ ಇತ್ಯಾದಿಗಳಿಂದ ಮೀನುಗಾರಿಕಾ ಉದ್ಯಮವು ಹಾನಿಗೊಳಗಾಗಿದ್ದು, ಹೆಚ್ಚಿದ ಡೀಸೆಲ್ ಬೆಲೆಯೂ ಇದೆಲ್ಲದರ ಮೇಲೆ ತುಂಬಾ ಪರಿಣಾಮ ಬೀರಿತ್ತು.

ಸಮುದ್ರವು ಈಗ ಶಾಂತವಾಗಿರುವುದರಿಂದ, ಆಳ ಸಮುದ್ರ ಮೀನುಗಾರಿಕೆಗೆ ಸೂಕ್ತವಾದ ಸಮಯ ಇದಾಗಿದ್ದು ಐಸ್ ಪ್ಲಾಂಟ್‌ಗಳು, ಅಂಗಡಿಗಳು, ಹೋಟೆಲ್‌ಗಳು, ಮೀನು ಕತ್ತರಿಸುವ ಕೆಲಸಗಾರರು, ಸಾರಿಗೆ ಮತ್ತು ಇತರ ಮೀನುಗಾರಿಕೆಯನ್ನು ಅವಲಂಬಿಸಿರುವ ವಲಯಗಳು ಸಹ ಪೂರ್ಣ ಅವಧಿ ಕೆಲಸ ಮಾಡಲು ಆರಂಭಿಸಿವೆ. ಮೀನುಗಾರಿಕೆ ಕೆಲಸಗಾರರು ಉತ್ತಮ ಸಂಬಳ ಪಡೆಯುತ್ತಿದ್ದು ಈ ಬಾರಿ ಸಂಭ್ರಮದಲ್ಲಿದ್ದಾರೆ.

Related Stories

No stories found.
TV 5 Kannada
tv5kannada.com