ಬಹು ಕಾಯಿಲೆಗೆ ರಾಮಬಾಣ ಕ್ಯಾಪ್ಸಿಕಂ ಸಲಾಡ್..!

ಬಹು ಕಾಯಿಲೆಗೆ ರಾಮಬಾಣ ಕ್ಯಾಪ್ಸಿಕಂ ಸಲಾಡ್..!

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 3 ಬಣ್ಣಗಳ ಕ್ಯಾಪ್ಸಿಕಂ ಕಾಣಸಿಗುತ್ತದೆ. ಹಸಿರು, ಹಳದಿ ಹಾಗೂ ಕೆಂಪು ಬಣ್ಣಗಳಲ್ಲಿರುವ ಕ್ಯಾಪ್ಸಿಕಂನ ಉಪಯೋಗ ತಿಳಿದರೆ ನೀವು ಕ್ಯಾಪ್ಸಿಕಂ ಫ್ಯಾನ್ ಆಗ್ತೀರ ನಿಜಕ್ಕೂ ಇದೊಂದು ಬಹುಪಯೋಗಿ ತರಕಾರಿ. ಕೆಂಪು ಬಣ್ಣದ ಕ್ಯಾಪ್ಸಿಕಂ ಹೃದಯ ಸಂಬಂಧಿ ಕಾಯಿಲೆಗೆ ರಾಮಭಾಣವಾದರೆ ಹಸಿರು ಬಣ್ಣದ ಕ್ಯಾಪ್ಸಿಕಂ ಜೀರ್ಣಕ್ರೀಯೆಯನ್ನು ಸುಲಭ ಗೊಳಿಸುವುದಲ್ಲದೆ ಆ್ಯಂಟಿ ಒಕ್ಸಿಡೆಂಟ್ ಆಗಿಯೂ ಕೆಲಸ ಮಾಡುತ್ತದೆ ಮುಖ್ಯವಾಗಿ ಮಾಂಸಖಂಡಗಳಲ್ಲಿ ಕಂಡುಬರುವ ನೋವು ನಿವಾರಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಇಷ್ಟೆಲ್ಲಾ ಉಪಯೋಗವಿರುವ ಕ್ಯಾಪ್ಸಿಕಂ ಬಳಸುವ ಸರಿಯಾದ ವಿಧಾವ ತಿಳಿದುಕೊಂಡಿರಬೇಕು , ಸಾಮಾನ್ಯವಾಗಿ ಎಲ್ಲಾ ಆಹಾರ ಪದಾರ್ಥಗಳನ್ನು ಬೇಯಿಸಿ ಬಳಸಲಾಗುತ್ತದೆ ಅದರೆ ಬೇಯಿಸಿದ ಕ್ಯಾಪ್ಸಿಕಂ ತನ್ನ ಗುಣವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಕ್ಯಾಪ್ಸಿಕಂನ್ನು ಸಲಾಡ್ ರೂಪದಲ್ಲಿ ಸೇವಿಸುವುದು ಉತ್ತಮ. ಸಣ್ಣಗೆ ಹೆಚ್ಚಿಟ್ಟು ಅದಕ್ಕೆ ಉಪ್ಪು ಹಾಗೂ ನ್ಯಾಚುರಲ್ ಪಾಪ್ರಿಕಾ ಬಳಸಿ ಸೇವಿಸಬಹುದು ನಾಲಿಗೆಯ ರುಚಿ ಕೊಡುವ ಈ ಸಲಾಡ್ ಅರೋಗ್ಯಕ್ಕೂ ಉತ್ತಮ .

Related Stories

No stories found.
TV 5 Kannada
tv5kannada.com