ಮಧುಮಗಳ ಅಲಂಕಾರಕ್ಕೆ ಆ್ಯಂಟಿಕ್ ಜ್ಯುವೆಲ್ಲರಿ ಟಚ್ ..!

ಮಧುಮಗಳ ಅಲಂಕಾರಕ್ಕೆ ಆ್ಯಂಟಿಕ್ ಜ್ಯುವೆಲ್ಲರಿ ಟಚ್ ..!

ಲುಕ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದ ಹೆಣ್ಮಕ್ಕಳೂ ಕೂಡ ಮದುವೆ ನಿಶ್ಚಯವಾದ ದಿನದಿಂದಲೂ ಮದುವೆಗೆ ತಾನು ಹೇಗೆ ಕಾಣಬೇಕು ಎನ್ನುವ ತಯಾರಿಯಲ್ಲಿ ಇರುತ್ತಾರೆ. ಮುಖದ ಮೇಕಪ್​ನಿಂದ ಹಿಡಿದು ಮದುವೆಯ ಆಭರಣದವರೆಗೂ ತಿಂಗಳವರೆಗೆ ಶಾಪಿಂಗ್​ನಲ್ಲಿ ತೊಡಗುವವರೂ ಇದ್ದಾರೆ. ಇಲ್ಲಿ ತಯಾರಿ ಒಳ್ಳೆಯದೇ ಆದರೆ ಮದುಮಗಳು ತಾನು ಎಂದೂ ಕಾಣದಷ್ಟು ಸುಂದರವಾಗಿ ಕಾಣಬೇಕು ಎನ್ನುವ ಕಾರಣಕ್ಕೆ ಇನ್ನಿಲ್ಲದ ಪ್ರಯೋಗ ಮಾಡುವುದು ಒಳ್ಳೆಯದಲ್ಲ. ಮುಖ್ಯವಾಗಿ ಮದುವೆಯ ದಿನ ಧರಿಸುವ ಸೀರೆಗೆ ನೀವು ತೊಡುವ ಆಭರಣಗಳು ಸರಿ ಹೊಂದಬೇಕು ಜೊತೆಗೆ ಅದು ಲೇಟೆಸ್ಟ್ ಡಿಸೈನ್ ಹಾಗೂ ಟ್ರೆಂಡ್ನಲ್ಲಿ ಇರುವಂತೆ ನೋಡಿಕೊಳ್ಳುವುದು ಮುಖ್ಯ . ಇವತ್ತು ಮದುಮಗಳ ಅಲಂಕಾರದಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿರೋ ಆ್ಯಂಟಿಕ್ ಜ್ಯುವೆಲ್ಲರಿ ಬಗ್ಗೆ ತಿಳಿಯಿರಿ.

ಆಭರಣಗಳಲ್ಲಿ ಬೇರೆ ಬೇರೆ ವಿಧಗಳಿದ್ದು ಸದ್ಯ ಆ್ಯಂಟಿಕ್ ಜ್ಯುವೆಲ್ಲರಿ ಟ್ರೆಂಡ್ನಲ್ಲಿದೆ. ಇದು ಮಧುಮಗಳಿಗೆ ರಿಚ್ ಲುಕ್ ನೀಡೋದ್ರಲ್ಲಿ ನೋ ಡೌಟ್. ಆದರೆ ಆ್ಯಂಟಿಕ್ ಜ್ಯುವೆಲ್ಲರಿಗಳು ಇತರೆ ಪ್ಯಾಟನ್ಸ್ಗಳಿಗಿಂತ ದುಬಾರಿ ಹಾಗೆ ಲೈಟ್ ವೈಟ್ ಆಯ್ಕೆಗಳು ಇರೋದಿಲ್ಲ ಇದರ ಶೇಡ್ ಕೂಡ ವಿಭಿನ್ನವಾಗಿದೆ. ಇತ್ತೀಚಿಗೆ ಟ್ರೆಂಡ್ನಲ್ಲಿರುವ ಸಾಫ್ಟ್ ಸಿಲ್ಕ್ ಸೀರೆಗಳಿಗೆ ಆ್ಯಂಟಿಕ್ ಜ್ಯುವೆಲ್ಲರಿ ಪರ್ಫೆಕ್ಟ್ ಕಾಂಬಿನೇಶನ್.

Related Stories

No stories found.
TV 5 Kannada
tv5kannada.com