ಕ್ಲಿಯರ್ ಸ್ಕಿನ್​ಗೆ ಅಲೋವೆರಾ ಫೇಸ್​ ಪ್ಯಾಕ್​

ಕ್ಲಿಯರ್ ಸ್ಕಿನ್​ಗೆ ಅಲೋವೆರಾ ಫೇಸ್​ ಪ್ಯಾಕ್​

ಸೌಂದರ್ಯ ಲೋಕದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಅಲೋವೆರಾದ ಉಪಯೋಗಗಳು ಬಹಳಷ್ಟಿವೆ. ಮುಖದ ಕಾಂತಿ ಹೆಚ್ಚಿಸುವುದರಲ್ಲಿ ಅಲೋವೆರಾದ್ದೇ ಮೇಲುಗೈ. ಅಂದಮೇಲೆ ನಾವಿವತ್ತು ಅಲೋವೆರಾದಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸುವ ರೀತಿ ತಿಳಿಯೋಣ. 

ಮಾರುಕಟ್ಟೆಯಲ್ಲಿ ನೂರಾರು ಬ್ರ್ಯಾಂಡ್​ಗಳ ಅಲೋವೆರಾ ಜೆಲ್ ಲಭ್ಯವಿದೆ. ಆದರೆ, ಸೌಂದರ್ಯ ತಜ್ಙರ ಪ್ರಕಾರ, ನೈಸರ್ಗಿಕವಾಗಿ ಮನೆಯಲ್ಲೇ ಬೆಳೆಸಿದ ಅಲೋವೆರಾ ಗಿಡದಿಂದ ತೆಗೆದ ಲೋಳೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಹೀಗಾಗಿ, ಮನೆಯಲ್ಲಿ ತಯಾರಿಸುವ ಅಲೋವೆರಾ ಫೇಸ್​ ಪ್ಯಾಕ್​ಗೆ ನೈಸರ್ಗಿಕ ಜೆಲ್ ಬಳಸುವುದು ಉತ್ತಮ. 

ಫೇಸ್​ ಪ್ಯಾಕ್​ ತಯಾರಿಸಲು ಮೊದಲು ಒಂದು ಬೌಲ್​ನಲ್ಲಿ ಅರ್ಧದಷ್ಟು ಅಲೋವೆರಾ ಲೋಳೆ ತೆಗೆದುಕೊಂಡು ಅದಕ್ಕೆ 2 ಚಮಚ ಜೇನುತುಪ್ಪ ಸೇರಿಸಿ. ಇವೆರಡರ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಒದ್ದೆಯಾದ ಕಾಟನ್ ಬಟ್ಟೆಯ ಸಹಾಯದಿಂದ ಶುಚಿಗೊಳಿಸಿ. ಹೀಗೆ, ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಮುಖದ ಮೇಲಿನ ಕಲೆಗಳು ಕ್ಲಿಯರ್ ಆಗುತ್ತವೆ. 

Related Stories

No stories found.
TV 5 Kannada
tv5kannada.com