Wednesday, May 18, 2022

ವಿಟಮಿನ್ ಡಿ ಕೊರತೆ ಭಾರತೀಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದೇಕೆ..?

Must read

ಭಾರತದ ಎಲ್ಲಾ ವಯೋಮಾನದವರಲ್ಲಿ ವಿಟಮಿನ್ ಡಿ ಕೊರತೆಯು 80% ರಿಂದ 90% ರಷ್ಟು ಹೆಚ್ಚಾಗಿದೆ . ಇದು ಕ್ಯಾನ್ಸರ್ ಮತ್ತು ಕ್ಷಯರೋಗಕ್ಕೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ವಿಟಮಿನ್ ಡಿ ಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿದೆ. ಎಲ್ಸೆವಿಯರ್ ಪಬ್ಲಿಕ್ ಹೆಲ್ತ್ ಎಮರ್ಜೆನ್ಸಿ ಕಲೆಕ್ಷನ್ ಜರ್ನಲ್​​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವಿಟಮಿನ್ ಡಿ ಕೊರತೆಯು ಕೋವಿಡ್ -19 ಸೋಂಕನ್ನು ಹೆಚ್ಚು ತೀವ್ರಗೊಳಿಸುತ್ತದೆ ಎಂದು ತಿಳಿದುಬಂದಿದೆ.

ವಿಟಮಿನ್ ಡಿ ಗೆ, ಅನಾರೋಗ್ಯಕರ ಆಹಾರ ಮತ್ತು ಜಡ ಜೀವನಶೈಲಿ ಎರಡು ಪ್ರಮುಖ ಅಂಶಗಳಾಗಿವೆ. ಆದರೆ ಮುಂಬೈನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ. ರಾಕೇಶ್ ನಾಯರ್ ಪ್ರಕಾರ, ವಿಟಮಿನ್ ಡಿ ಕೊರತೆಯ ಹಿಂದಿನ ಪ್ರಮುಖ ಕಾರಣವೆಂದರೆ ನಾವು ಸೂರ್ಯನ ಬೆಳಕನ್ನು ಪಡೆಯದಿರುವುದು.

ನಾವು ನಮ್ಮ ಹೆಚ್ಚಿನ ಸಮಯವನ್ನು ಮನೆಯೊಳಗೆ, ಕಚೇರಿಯಲ್ಲಿ ಅಥವಾ ಮನೆಯಲ್ಲಿಯೇ ಕಳೆಯುತ್ತೇವೆ. ನಾವು ಹೊರಗೆ ಹೋದರೂ ಸಹ ಹೆಚ್ಚಾಗಿ ಸಂಜೆ ಸಮಯದಲ್ಲಿ ಹೋಗುತ್ತೇವೆ.ಇದು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು. ಜೀವಸತ್ವಗಳನ್ನು ಸಕ್ರಿಯಗೊಳಿಸಲು ಮೂಲತಃ, ಸೂರ್ಯನ ಬೆಳಕು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನಿಮಗೆ ಪ್ರತಿದಿನವೂ ಸೂರ್ಯನ ಬೆಳಕಿನ ಅಗತ್ಯವಿರುತ್ತದೆ.

ವಿಟಮಿನ್ ಡಿ ಕೊರತೆಯ ಐದು ಎಚ್ಚರಿಕೆಯ ಲಕ್ಷಣಗಳು:

ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ, ಸಂಪೂರ್ಣ ಚೇತರಿಕೆ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ವಿಟಮಿನ್ ಡಿ ಕೊರತೆ ವಿಳಂಬಗೊಳಿಸುತ್ತದೆ.

ದುರ್ಬಲ ಸ್ನಾಯುಗಳು 

ಇತ್ತೀಚಿನ ದಿನಗಳಲ್ಲಿ, ನಾವು ಕೆಲಸದ ಕಾರಣದಿಂದಾಗಿ ಜಡವಾಗಿದ್ದೇವೆ. ವ್ಯಾಯಾಮ ಕಡಿಮೆಯಾಗಿದೆ, ಮತ್ತು ಮುಖ್ಯವಾಗಿ, ನಾವು ಅಗತ್ಯವಾದ ಪ್ರಮಾಣದ ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುತ್ತಿಲ್ಲ. ಇದು ಹೆಚ್ಚು ನೋವಿನ ಸಮಸ್ಯೆಯನ್ನು ಉಂಟುಮಾಡುತ್ತದೆ. ಹೆಚ್ಚಾಗಿ. ಬೆನ್ನು ನೋವು ಇರುವ ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದಾರೆ ಎಂದು ಡಾ. ನಾಯರ್ ಹೇಳಿದರು.

ಗಾಯಗಳು  ಶ್ರೀಘ್ರ ಗುಣಮುಖವಾಗುವುದಿಲ್ಲ

Also read:  ಉತ್ತಮ ಅಂಕ ಗಳಿಸಲು 5 ಸುಲಭ ಸೂತ್ರ ಅನುಸರಿಸಿ

ವಿಟಮಿನ್ ಡಿ ಕೊರತೆಯಿಂದಾಗಿ, ನಿಮ್ಮ ಒಟ್ಟಾರೆ ಗುಣಪಡಿಸುವ ಪ್ರಕ್ರಿಯೆ ಮೇಲೆಯೂ ಪರಿಣಾಮ ಬೀರುತ್ತದೆ, ಮತ್ತು ಇದು ಗಾಯದ ಗುಣಪಡಿಸುವಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕೂದಲು ಉದುರುವಿಕೆ

ನೀವು ಭಾರಿ ಪ್ರಮಾಣದ ಕೂದಲು ಉದುರುವಿಕೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯಿಂದಾಗಿರಬಹುದು. ಏಕೆಂದರೆ ಇದು ಪುರುಷರು ಮತ್ತು ಮಹಿಳೆಯರಲ್ಲಿ ಅಲೋಪೆಸಿಯಾ ಉಂಟುಮಾಡುತ್ತದೆ, ಇಂಟರ್ನ್ಯಾಷನಲ್ ಜರ್ನಲ್ ಆಫ್ ಮಾಲಿಕ್ಯುಲರ್ ಸೈನ್ಸಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವಿಟಮಿನ್ ಡಿ ಕೊರತೆಯು ಸೀರಮ್ನ ನಷ್ಟಕ್ಕೆ ಕಾರಣವಾಗುತ್ತದೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ನಿಮ್ಮ ಕೂದಲನ್ನು ನಿಮ್ಮ ಉದರದಂತೆ ನೋಡಿಕೊಳ್ಳಲು ನೀವು ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದ್ದರೂ ಪ್ರಯೋಜನವಾಗದಿದ್ದರೆ, ಬಿಸಿಲಿನಲ್ಲಿ ನಿಂತು ವಿಟಮಿನ್ ಡಿ ಪಡೆಯುವ ಸಮಯ ಇದು.

Also read:  ವಿಶ್ವದೆಲ್ಲೆಡೆ 1,400 ಪ್ರಭಾವಿಗಳ ಮೊಬೈಲ್‌ಗೆ ಕನ್ನ!

ಉಸಿರಾಟದ ತೊಂದರೆ

ಕೊರೊನಾ ವೈರಸ್ ಮಾತ್ರವಲ್ಲ, ವಿಟಮಿನ್ ಡಿ ಕೊರತೆಯೂ ಇತರ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ನಿಮ್ಮನ್ನು ಉಸಿರಾಟದ ಅಲರ್ಜಿಗೆ ಹೆಚ್ಚು ಒಳಪಡಿಸುತ್ತದೆ ಮತ್ತು ಉಸಿರಾಟದ ಪ್ರದೇಶದಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಮಳೆಗಾಲದಲ್ಲಿ, ಪರಾಗ, ಶಿಲೀಂಧ್ರ ಮತ್ತು ಇತರ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಇರುವುದರಿಂದ, ನೀವು ಅಲರ್ಜಿಯಿಂದ ಬಳಲುತ್ತಿರುವ ಸಾಧ್ಯತೆಗಳಿವೆ ಎಂದು ಇಂಟರ್ನ್ಯಾಷನಲ್ ಆರ್ಕೈವ್ಸ್ ಆಫ್ ಅಲರ್ಜಿ ಮತ್ತು ಇಮ್ಯುನೊಲಾಜಿಯಲ್ಲಿ ಪ್ರಕಟವಾದ ಅಧ್ಯಯನವು ತಿಳಿಸಿದೆ.

ಹಾಗಾಗಿ ಈಗಿನಿಂದಲೇ ನಿಮ್ಮ ಜೀವನ ಶೈಲಿಯ ಬದಲಾವಣೆ ಮಾಡಿಕೊಳ್ಳುವುದು ಒಳಿತು .

ವರದಿ-ಶಿಲ್ಪಾ ರಾಜನ್​

Latest article