Wednesday, June 29, 2022

ಡ್ರೈ ಸ್ಕಿನ್ ಸಮಸ್ಯೆಗೆ ಸಿಂಪಲ್ ಸಲ್ಯೂಷನ್

Must read

ಸಾಮಾನ್ಯವಾಗಿ ಎಲ್ಲರಲ್ಲೂ ಚಳಿಗಾಲದ ಸಮಯದಲ್ಲಿ ಒಣ ಚರ್ಮ ಕಾಣಿಸಿಕೊಳ್ಳುತ್ತದೆ ಆದರೆ ಕೆಲವರಲ್ಲಿ ಒಣ ಚರ್ಮ ಸಮಸ್ಯೆ ಬಹಳವಾಗೇ ಕಾಡುತ್ತಿರುತ್ತದೆ ಇದರಿಂದ ಹೊರಬರಲು ಚರ್ಮದ ಮೇಲೆ ಇನ್ನಿಲ್ಲದ ಪ್ರಯೋಗ ನಡೆಸುತ್ತಾರೆ. ಆದರೆ, ನಿಮಗೆ ತಿಳಿದಿರಲಿ ಒಣ ಚರ್ಮಕ್ಕೆ ನಿಮ್ಮ ಮನೆಯ ಅಡುಗೆ ಮನೆಯಲ್ಲೇ ಪರಿಹಾರ ಇದೆಯೆಂದು, ಹಾಗೇ ಇದು ಕಡಿಮೆ ಖರ್ಚಿನ ಅತೀ ಸರಳ ವಿಧಾನ.

ಮಾಡುವ ವಿಧಾನ:

ಪ್ರತಿದಿನ ಮನೆಗಳಲ್ಲಿ ಬಳಸುವ ಸಾಮಾನ್ಯ ಪದಾರ್ಥ ಹಾಲು. ಸಾಮಾನ್ಯವಾಗಿ ಕಾಯಿಸಿದ ಹಾಲಿನ ಮೇಲೆ ಕೆನೆ ಕಟ್ಟುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ. ಹಾಲಿನ ಕೆನೆಯನ್ನ ಒಂದು ಬೌಲ್​ನಲ್ಲಿ ಸಂಗ್ರಹಿಸಿ ಅದಕ್ಕೆ 1 ಚಮಚ ಅರಶಿನ ದ ಹುಡಿ ಸೇರಿಸಿ ಆ ಮಿಶ್ರಣವನ್ನ ಪ್ರತಿದಿನ ಮುಖ ಹಾಗೂ ಕೈಕಾಲಿಗೆ ಹಚ್ಚಿ 30 ನಿಮಿಷದ ನಂತರ ಸ್ನಾನ ಮಾಡುವುದರಿಂದ ಡ್ರೈ ಸ್ಕಿನ್ ಸಮಸ್ಯೆ ಮತ್ತೆಂದೂ ತಲೆದೋರುವುದಿಲ್ಲ.

Latest article