Tuesday, August 16, 2022

ವಿದ್ಯಾರ್ಥಿಗಳ ಗುಪ್ತಾಂಗ ಮುಟ್ಟಿ ವಿಕೃತಿ: 40 ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡ ಶಿಕ್ಷಕ

Must read

ಕೊಪ್ಪಳ: ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.

ಸರ್ಕಾರಿ ಶಾಲೆ ಶಿಕ್ಷಕ ಅಜರುದ್ಧೀನ್​ ಎಂಬಾತ ಇತರ ಮಕ್ಕಳಿಂದ  ಬಟ್ಟೆ‌‌ ಬಿಚ್ಚಿಸಿ ವಿದ್ಯಾರ್ಥಿಗಳ ಗುಪ್ತಾಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಶಿಕ್ಷಕ‌ನ ವಿಕೃತಿ‌ಯ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಅಲ್ಲದೇ  ಪುಸಲಾಯಿಸಿ ಸುಮಾರು 40 ಮಹಿಳೆಯರನ್ನ ಲೈಂಗಿಕವಾಗಿ ಬಳಸಿಕೊಂಡಿರುವ ಅಜರುದ್ಧೀನ್, ರಾಸಲೀಲೆಯನ್ನು ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು, ಮಹಿಳೆಯರನ್ನು ಬೆದರಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.

ಶಿಕ್ಷಕ ‌ಅಜುರುದ್ಧಿನ್​ ವಿರುದ್ಧ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿದ ಸಿಂಧನೂರು ಬಿಇಒ ಶರಣಪ್ಪ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Latest article