Tuesday, May 17, 2022

ಕೊಪ್ಪಳ ನಗರಸಭೆಯ ಕಂದಾಯ ಅಧಿಕಾರಿ ಆತ್ಮಹತ್ಯೆ: ಪೌರಾಯುಕ್ತರ ಮೇಲೆ ಅನುಮಾನದ ಹುತ್ತ

Must read

ಕೊಪ್ಪಳ: ಕೊಪ್ಪಳ ನಗರಸಭೆಯ ಕಂದಾಯ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೀಧರ ಅಂಗಡಿ ಮೃತ ದುರ್ದೈವಿ.

ಸಿಬ್ಬಂದಿಗಳು ಮತ್ತು ಪೌರಾಯುಕ್ತರ ಮಧ್ಯೆ ಸಮನ್ವಯತೆ ಇಲ್ಲದ ಕಾರಣ ಪೌರಾಯುಕ್ತರ ಕಿರುಕುಳಕ್ಕೆ ಬೇಸತ್ತು ಶ್ರೀಧರ ಅಂಗಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ನಗರಸಭೆಯ ಕಂದಾಯ ಅಧಿಕಾರಿಯಾಗಿದ್ದ ಚೈತ್ರಾ ಎನ್ನುವವರು ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.

ನಗರಸಭೆಯಲ್ಲಿ ಪೌರಾಯುಕ್ತರ ಕಿರುಕುಳಕ್ಕೆ ಅನೇಕ ಸಿಬ್ಬಂದಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ.

ಘಟನೆ ಸಂಬಂಧ ಕೊಪ್ಪಳ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article