Tuesday, May 17, 2022

ರೈತ ಮುಖಂಡನಿಂದಲೇ ರೈತರಿಗೆ ಲಕ್ಷ ಲಕ್ಷ ವಂಚನೆ: ಕಟ್ಟಿಕೊಂಡ ಪತ್ನಿಗೂ ಕೈಕೊಟ್ಟು ಪರಾರಿ

Must read

ಕೊಪ್ಪಳ: ಜಿಲ್ಲೆಯ ರೈತ ಮುಖಂಡನೊಬ್ಬ ರೈತರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕ ರೈತ ಸೇನೆಯ ರಂಗನಾಥ ಅಲಿಯಾಸ್​ ವಿಜಯಾನಂದ ಪ್ರಕರಣದ ಆರೋಪಿ.

ಮೊದಲು ಆರ್.ಎಂ.ಪಿ ವೈದ್ಯನಾಗಿದ್ದ ವಿಜಯಾನಂದ ಬಳಿಕ ತಾನು ರೈತ ಎಂದು ರೈತ ಮುಖಂಡನ ಸ್ಥಾನ ಗಿಟ್ಟಿಸಿಕೊಂಡಿದ್ದ. ರೈತರನ್ನೇ ಟಾರ್ಗೆಟ್​ ಮಾಡುತ್ತಿದ್ದ ಈತ ಕರ್ನಾಟಕ ರೈತ ಸೇನೆ ಸಂಘಟನೆಗೆ ಸೇರಿಸಿಕೊಳ್ಳುವ ನೆಪದಲ್ಲಿ ಹತ್ತಾರು ರೈತರಿಗೆ ಲಕ್ಷ ಲಕ್ಷ ವಂಚನೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನು ಈತ ರೈತರಿಗಷ್ಟೇ ಅಲ್ಲ, ತನ್ನ ಹೆಂಡತಿಗೂ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಮತ್ತೊಂದು ಮದುವೆ ಮಾಡಿಕೊಂಡಿರುವ ವಿಜಯಾನಂದ ಮೊದಲ ಪತ್ನಿಗೆ ಕೈಗೂ ಸಿಗದೇ ಕಣ್ಮರೆಯಾಗಿದ್ದಾನೆ. ರೈತರಿಗೆ ಮಾಡುವ ವಂಚನೆ ಕಂಡು ಬೇಸತ್ತಿರುವ ಪತ್ನಿ ನನ್ನ ಗಂಡನನ್ನು ಹುಡುಕಿ ವಂಚನೆಗೊಳಗಾದವರಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

Latest article