Thursday, October 6, 2022

ಕೊಡಗು: ಬಿಜೆಪಿ ಅಭ್ಯರ್ಥಿ ಸುಜಾ ಕುಶಲಪ್ಪ ಗೆಲುವು: ಎ.ಮಂಜು ಪುತ್ರನಿಗೆ ಮುಖಭಂಗ

Must read

ಕೊಡಗು: ವಿಧಾನ ಪರಿಷತ್​ ಚುನಾವಣೆಯಲ್ಲಿ ಕೊಡಗು ಬಿಜೆಪಿ ಅಭ್ಯರ್ಥಿ ಸುಜಾ ಕುಶಲಪ್ಪ ಗೆಲುವು ಸಾಧಿಸಿದ್ದಾರೆ.

ಕೊಡಗು ಕ್ಷೇತ್ರದಲ್ಲಿ ಒಟ್ಟು 1,229 ಮತಗಳಿದ್ದು, 105 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ವಿಧಾನ ಪರಿಷತ್​ ಚುನಾವಣೆಯಲ್ಲಿ ಕೊಡಗು ಕ್ಷೇತ್ರ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಮಾಜಿ ಸಚಿವ ಎ.ಮಂಜುರವರ ಪುತ್ರ ಮಂಥರ್ ಗೌಡ ಹಾಸನ ಜಿಲ್ಲೆಯಿಂದ ಕೊಡಗು ಕ್ಷೇತ್ರಕ್ಕೆ ಹೋಗಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಿದ್ದರು. ಆದರೆ ಈಗ ಕಾಂಗ್ರೆಸ್​ ಸೋಲು ಕಂಡಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.

ಮತಗಳ ವಿವರ
ಬಿಜೆಪಿ-705
ಕಾಂಗ್ರೆಸ್​-603

 

Latest article