Saturday, July 2, 2022

ಅಂತ್ಯಸಂಸ್ಕಾರ ಮಾಡಲು ಬಿಡದೇ ಮಹಿಳೆಯ ಶವದ ಪಕ್ಕವೇ ಕುಳಿತ ಕೋತಿ..!

Must read

ಕಲಬುರಗಿ: ಕೋತಿಯೊಂದು ಮಹಿಳೆಯ ಅಂತ್ಯಸಂಸ್ಕಾರ ಮಾಡೋದಕ್ಕೆ ಬಿಡದೇ ಸಾವಿನ ಮನೆಯಲ್ಲೇ ಕುಳಿತಿರುವ ಘಟನೆ ಕಲಬುರಗಿ ಜಿಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ.

ಮಾಲಗತ್ತಿ ಗ್ರಾಮದ ಶ್ಯಾಮಲಾ ಎಂಬುವವರು ಕಾಯಿಲೆಯಿಂದ ಬುಧವಾರ ಮಧ್ಯಾಹ್ನ ಸಾವನ್ನಪ್ಪಿದ್ದರು. ಸಂಜೆಯ ವೇಳೆಗೆ ಶ್ಯಾಮಲಾ ಶವದ ಪಕ್ಕ ಬಂದು ಕುಳಿತಿರುವ ಕೋತಿ, ಅಲ್ಲಿಂದ ಕದಲುತ್ತಿಲ್ಲ. ಕೋತಿ ಶವದ ಪಕ್ಕದಲ್ಲೇ ಕುಳಿತಿರುವ ಹಿನ್ನೆಲೆಯಲ್ಲಿ ಸಂಬಂಧಿಕರು ಶವದ ಬಳಿ ತೆರಳಲು ಹೆದರುತ್ತಿದ್ದಾರೆ. ಇದುವರೆಗೂ ಕೋತಿ ಅಲ್ಲಿಂದ ಕದಲಿಲ್ಲ. ಹೀಗಾಗಿ, ಗ್ರಾಮಸ್ಥರು ಅಂತ್ಯಸಂಸ್ಕಾರ ಮಾಡಲು ಶವ ತೆಗೆದುಕೊಂಡು ಹೋಗಲು ಭಯಪಡುತ್ತಿದ್ದಾರೆ.

ಸಾವಿನ ಮನೆಯಿಂದ ಕೋತಿಯನ್ನು ಓಡಿಸಲು ಎಷ್ಟೇ ಪ್ರಯತ್ನಪಟ್ಟರೂ ಕದಲುತ್ತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದೆಯಾದರೂ ಇತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

Latest article