Monday, January 30, 2023

ಚುನಾವಣೆ ಸಮೀಸುತ್ತಿರುವ ಹಿನ್ನೆಲೆ ಉಡುಗೊರೆ ನೀಡಲು ಆರಂಭಿಸಿದ ಶಾಸಕ

Must read

ಕಲಬುರ್ಗಿಯ ಬಬಲಾದ್ ಗ್ರಾಮದಲ್ಲಿ ಬಿಜೆಪಿ ಗ್ರಾಮೀಣ ಕ್ಷೇತ್ರದ ಎಂಎಲ್ ಎ ಬಸವರಾಜ್ ಮತ್ತಿಮುಡ್ ಅವರು ಸೀರೆ ಹಂಚುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಶಾಸಕರ ಭಾವಚಿತ್ರ ಹಾಗೂ ಬಿಜೆಪಿ ಪಕ್ಷದ ಚಿನ್ನೆ ಇರುವ ಬ್ಯಾಗ್ ನಲ್ಲಿ ಉಡುಗೊರೆ ನೀಡಲಾಗಿದ್ದು ಗ್ರಾಮದ ಮಹಿಳೆಯರಿಗೆ ಶಾಸಕರಿಂದ ಸೀರೆ ಉಡುಗೊರೆ, ಮುತ್ತೈದೆಯರಿಗೆ ಉಡಿ ತುಂಬುವ ಹೆಸರಿನಲ್ಲಿ 10 ಸಾವಿರ ಸೀರೆ ಹಂಚಿದ್ದಾರೆ. ಗುರುಚನ್ನವೀರ ಮಹಾಶಿವಯೋಗಿಗಳ 38 ನೇ ಪುಣ್ಯಸ್ಮರಣೆ ಹಾಗೂ ಗುರುಪಾದಲಿಂಗ ಮಹಾಶಿವಯೋಗಿಗಳ 111 ನೇ ತಪೋನುಷ್ಠಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಮತಗಳು ಸೆಳೆಯುವ ತಂತ್ರ ಹೂಡಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಕ್ಷದ ಚಿನ್ನೆ ಹಾಗೂ ಶಾಸಕರ ಭಾವಚಿತ್ರ ಉಡುಗೊರೆ ನೀಡಿದ್ದು ಎಷ್ಟು ಸರಿ ಎಂದು ಜನರು ಪ್ರಶ್ನೆಮಾಡುತ್ತಿದ್ದಾರೆ

Latest article