ಕಲಬುರಗಿ: ಸಿಐಡಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದಿದ್ದ ಎಂಟು ಅಭ್ಯರ್ಥಿಗಳ ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ ತಾಲೂಕಿನ ನಿವಾಸಿಗಳಾದ ರವಿರಾಜ್, ಪೀರಪ್ಪ, ಶ್ರೀಶೈಲ್, ಭಗವಂತ, ಸಿದ್ದು ಪಾಟೀಲ್, ಸೋಮನಾಥ, ಕಲ್ಲಪ್ಪ, ವಿಜಯಕುಮಾರ್ ಬಂಧಿತ ಆರೋಪಿಗಳು. ಆರೋಪಿ ಸಿದ್ದು ಪಾಟೀಲ್ ಎಫ್ಡಿಎ, ಕಲ್ಲಪ್ಪ ಪೊಲೀಸ್ ಪೇದೆ, ಪೀರಪ್ಪ ಹಾಸ್ಟೆಲ್ನಲ್ಲಿ ಕುಕ್ ಆಗಿದ್ದಾರೆ. ಆರೋಪಿಗಳು ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದರು.
ಎಂಟು ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಎಂಟು ಅಭ್ಯರ್ಥಿಗಳ ಹೆಸರು ಇತ್ತು. ಕಲಬುರಗಿ ನಗರದ ಎಸ್ಬಿಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು. ಎಲ್ಲಾ ಪಿಎಸ್ ಐ ಪರೀಕ್ಷೆ ಅಭ್ಯರ್ಥಿಗಳು ಆರ್.ಡಿ.ಪಾಟೀಲ್ ಕಡೆಯವರು.