Thursday, January 27, 2022

ಲಸಿಕೆಗೆ ಹೆದರಿ ಸ್ವಂತ ಮ್ಕಕಳನ್ನೇ ಅಪಹರಿಸಿದ ಪತ್ನಿ: ಪತಿ ಆರೋಪ..! 

Must read

ಕೋವಿಡ್ ಲಸಿಕೆಯಿಂದ ರಕ್ಷಿಸಲು ತನ್ನ ಹೆಂಡತಿ ಇಬ್ಬರು ಮಕ್ಕಳನ್ನು ಅಪಹರಿಸಿದ್ದಾಳೆ ಎಂದು ಸ್ಪೇನ್‌ನಲ್ಲಿ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ಇಬ್ಬರು ಮಕ್ಕಳ ಉಸ್ತುವಾರಿಯನ್ನು ತಂದೆಗೆ ಹಸ್ತಾಂತರಿಸಿದೆ. ಮಕ್ಕಳ ವಯಸ್ಸು 14 ಮತ್ತು 12 ವರ್ಷಗಳು. ಸ್ಪೇನ್‌ನಲ್ಲಿ, ಸರ್ಕಾರವು 11 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯಗೊಳಿಸಿದೆ.

ಅಪಹರಣದ ಆರೋಪಿಯಾಗಿರುವ ಮಹಿಳೆ 46 ವರ್ಷ ವಯಸ್ಸಿನವಳಾಗಿದ್ದು , ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 14 ಮತ್ತು 12 ವರ್ಷದ ಮಕ್ಕಳಿಗೆ ಲಸಿಕೆ ಹಾಕಲು ಪತ್ನಿ ಇಷ್ಟವಿರಲಿಲ್ಲ ಎಂದು ಪತಿ ಆರೋಪಿಸಿದ್ದಾರೆ. ಹಾಗಾಗಿ ಅವರನ್ನು ಮರೆ ಮಾಡಿದ್ದಳು. ಈ ಬಗ್ಗೆ ವ್ಯಕ್ತಿ ಡಿಸೆಂಬರ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ನನ್ನ ಹೆಂಡತಿ ಮಕ್ಕಳನ್ನು ಅಕ್ರಮವಾಗಿ ಎಲ್ಲೋ ಕರೆದುಕೊಂಡು ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ವೇಳೆ ಇಬ್ಬರೂ ಮಕ್ಕಳು ನವೆಂಬರ್ 4 ರಿಂದ ತಾಯಿಯೊಂದಿಗೆ ನಾಪತ್ತೆಯಾಗಿರುವುದು ಪೊಲೀಸರಿಗೆ ತಿಳಿದು ಬಂದಿದೆ.

ಇದೇ ವೇಳೆ ಮಕ್ಕಳಿಗೆ ಲಸಿಕೆ ಹಾಕಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಹಕ್ಕು ಪೋಷಕರಿಗೆ ಇದೆ ಎಂದು ನ್ಯಾಯಾಲಯ ಹೇಳಿತ್ತು. ಆದಾಗ್ಯೂ, ನಂತರ ಸ್ಪ್ಯಾನಿಷ್ ಸರ್ಕಾರ ಇದನ್ನು ಕಡ್ಡಾಯಗೊಳಿಸಿತು.
ಬುಧವಾರ ಮಹಿಳೆ ಅಧಿಕಾರಿಗಳ ಮುಂದೆ ಹಾಜರಾದರು. ಮಕ್ಕಳಿಬ್ಬರೂ ಅವರ ಜೊತೆಗಿದ್ದರು. ನಂತರ ಮಹಿಳೆಯನ್ನು ವಶಕ್ಕೆ ಪಡೆದು,ಇಬ್ಬರು ಮಕ್ಕಳನ್ನು ಅವರ ತಂದೆಗೆ ಒಪ್ಪಿಸಲಾಯಿತು.

Latest article