ನಾವು ಭಾರತೀಯರು, ನಮಗೆ ಚಳಿಗಾಲ ಬಂತು ಅಂದ್ರೆ ಮೊದಲು ಎಲ್ರೂ ಹೇಳೊದು ಒಂದೇ, ಅದೇನಂದ್ರೆ ಮೊದಲು ಬೆಚ್ಚಗಿನ ಸ್ವೆಟರ್ ತಗೊಳ್ಳಬೇಕಪ್ಪಾ ಅಂತಾ. ಆದ್ರೆ ವಿದೇಶಿ ಜನರಿಗೆ ಚಳಿ ಬಂತು ಅಂದ್ರೆ ಸಾಕು ಸ್ವೆಟ್ರು ಗಿಟ್ರು ಪಕ್ಕಕ್ಕಿಟ್ಟು ರಸ್ತೆ ಕ್ಲೀನಿಂಗ್ಗೆ ನಿಂತ್ಕೊಂಡ್ ಬಿಡ್ತಾರೆ. ಯಾಕಂದ್ರೆ ನಮ್ಮೂರಲ್ಲಿ ಚಳಿ ಬಂದ್ರೆ ಬರಿ ತಂಪಾದ ಗಾಳಿ ಬೀಸುತ್ತೆ ಆಕಾಶದಲ್ಲಿ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗುತ್ತೆ. ಆದ್ರೆ, ವಿದೇಶದಲ್ಲಿ ಚಳಿಗಾಲ ಅಂದ್ರೆ ಹಿಮಮಳೆಯೇ ಧರೆಗುರುಳುತ್ತೆ. ಚಳಿಗಾಲದಲ್ಲಿ ರಸ್ತೆಯುದ್ದಕ್ಕೂ ಹಿಮ್ಮ ಬಿದ್ದು ರಸ್ತೆಯುದ್ದಕ್ಕೂ ಆ್ಯಕ್ಸಿಡೆಂಟ್ಗಳ ಜಾತ್ರೆನೇ ನೋಡಬಹುದು . ಇಲ್ಲೊಂದು ರಸ್ತೆಯಲ್ಲಿ ವಾಹನಗಳು ತಮ್ಮ ಕಂಟ್ರೋಲ್ ತಪ್ಪಿ ಒಂದಕ್ಕೊಂದು ಡಿಕ್ಕಿ ಹೊಡೆಯುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.