Tuesday, May 17, 2022

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್ ಪಾಸಿಟಿವ್..!

Must read

ವಿಶ್ವದಾದ್ಯಂತ ಕೋವಿಡ್​ನ ಹೊಸ ಅಲೆ ಮುನ್ನೆಲೆಗೆ ಬರುತ್ತಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೋವಿಡ್​ ಪ್ರಕರಣಗಳು ನಿರಂತರವಾಗಿ ಏರುತ್ತಿದೆ. ಈ ಮಧ್ಯೆ ವಿಶ್ವದ ದೊಡ್ಡಣ್ಣ ಅಮೇರಿಕಾಗೂ ಕೋವಿಡ್​ನ ಹೊಸ ಅಲೆ ಹೊಡೆತ ನೀಡುವುದು ಪಕ್ಕಾ. ಸದ್ಯ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ.

ಶ್ವೇತಭವನ  ಈ ಬಗ್ಗೆ ಹೇಳಿಕೆ ನೀಡಿದ್ದು, ಉಪಾಧ್ಯಕ್ಷರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಹ್ಯಾರಿಸ್ ಅವರ ಮಾಧ್ಯಮ ಕಾರ್ಯದರ್ಶಿ ಕಿಸ್ಟನ್ ಅಲೆನ್ ಅವರು, ಕಮಲಾ ಹ್ಯಾರಿಸ್ ಜತೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಆಗಲೀ, ಅಥವಾ ಜಿಲ್ ಬಿಡೆನ್ ಆಗಲೀ, ನಿಕಟ ಸಂಪರ್ಕಕ್ಕೆ ಬಂದಿಲ್ಲ, ಅವರಿಬ್ಬರ ಪ್ರವಾಸದ ದಿನಾಂಕಗಳು ಬೇರೆಬೇರೆಯಾಗಿದ್ದವು. ಏಪ್ರಿಲ್ 18ರಂದು ಬಿಡೆನ್ ಮತ್ತು ಹ್ಯಾರಿಸ್ ಭೇಟಿಯಾಗಿದ್ದರು ತಿಳಿಸಿದ್ದಾರೆ. ವೆಸ್ಟ್ ಕೋಸ್ಟ್‌ಗೆ ತೆರಳಿದ್ದ ಕಮಲಾ ಹ್ಯಾರಿಸ್ ಅವರು ಮರಳಿ ಬಂದಿದ್ದು, ನಂತರ ಕೋವಿಡ್ ಪರೀಕ್ಷೆ ನಡೆಸಿದಾಗ, ಸೋಂಕು ತಗುಲಿರುವುದು ಪತ್ತೆಯಾಗಿದೆ. ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದು, ಚಿಕಿತ್ಸೆ ಪಡೆಯುವ ಜತೆಗೆ ಕಚೇರಿ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest article